Samosa Video Viral: ಸಮೋಸ ಅಂದ್ರೆ ಸಾಕು ಕೆಲವರಿಗೆ ಪಂಚ ಪ್ರಾಣ. ಗರಿ ಗರಿಯಾಗಿರುವ ಬಿಸಿ ಸಮೋಸದೊಳಗೆ ಏನು ಇದೆ ಅನ್ನೋದಕ್ಕಿಂದ ಅದರ ರುಚಿಯೇ ಬೇರೆ ಲೆವೆಲ್ ಇರುತ್ತೆ. ಆದ್ರೆ ಇದೀಗ ಸಮೋಸದೊಳಗೆ ಸತ್ತ ಕಪ್ಪೆಯೊಂದು ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Samosa Video Viral) ಆಗಿದೆ. ಸಮೋಸ ಪ್ರಿಯರಿಗೆ ಇದೊಂದು ಶಾಕಿಂಗ್ ನ್ಯೂಸ್ ಆಗಿದೆ.
ಹೌದು, ಉತ್ತರ ಪ್ರದೇಶದ ಗಾಜಿಯಾಬಾದ್‌ನ ಅಂಗಡಿಯೊಂದರಲ್ಲಿ ವ್ಯಕ್ತಿಯೊರ್ವ ಸಮೋಸಾ ಖರೀದಿಸಿ ತಿಂದಿದ್ದಾನೆ. ಒಂದು ಬೈಟ್ ತಿನ್ನುವಷ್ಟರಲ್ಲಿ ಸಮೋಸದೊಳಗೆ ಸತ್ತ ಕಪ್ಪೆ ಕಂಡು ಶಾಕ್ ಆಗಿದಾನೆ. ಅಲ್ಲದೆ ಅಂಗಡಿ ಮುಂದೆ ಯಜಮಾನನ್ನ ಕರೆಸಿ ಎಂದು ವಾದಕ್ಕೆ ಇಳಿದಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಸದ್ಯ @SachinGuptaUP ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸಮೋಸ ಪ್ರಿಯರಿಗೆ ಈ ವಿಡಿಯೋದಿಂದ ಇನ್ಮೇಲೆ ಸಮೋಸ ತಿನ್ನೋದ ಬೇಡ್ವಾ ಎಂಬ ಗೊಂದಲ ಆರಂಭ ಆಗಿದೆ..
