Home » Karkala: ಕಾರ್ಕಳ: ನಿಟ್ಟೆಯಲ್ಲಿ 4 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರ ಕಳವು

Karkala: ಕಾರ್ಕಳ: ನಿಟ್ಟೆಯಲ್ಲಿ 4 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರ ಕಳವು

0 comments

Karkala: ಕಾರ್ಕಳ( Karkala) ತಾಲೂಕಿನ ನಿಟ್ಟೆ ಗ್ರಾಮದ ಹೇನೊಟ್ಟು ಎಂಬಲ್ಲಿ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ನೆಟ್ಟಿದ್ದ ಶ್ರೀಗಂಧದ ಮರಗಳನ್ನು ಕಳ್ಳರು ಕಳವುಗೈದಿರುವ ಪ್ರಕರಣ ನಡೆದಿದೆ.

ನಿಟ್ಟೆಯ ದಿನೇಶ್‌ ಅವರು ತಮ್ಮ ಜಾಗದಲ್ಲಿ 225 ಶ್ರೀಗಂಧದ ಸಸಿಗಳನ್ನು ನೆಟ್ಟಿದ್ದು, ಜೂ.16 ರಂದು ಬೆಳಿಗ್ಗೆ ತೋಟಕ್ಕೆ ಹೋದಾಗ ಇದ್ದ ಮರಗಳು ಮರುದಿನ (ಜೂ.17) ಬೆಳಿಗ್ಗೆ ಹೋದಾಗ 4 ಲಕ್ಷ ರೂ. ಮೌಲ್ಯದ 9 ಶ್ರೀಗಂಧದ ಮರಗಳನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Vittla: ವಿಟ್ಲ: ಅನಂತೇಶ್ವರ ದೇವಸ್ಥಾನದ ಪ್ರದಾನ ಅರ್ಚಕರ ಮನೆಯಲ್ಲಿ ಕಳ್ಳತನ!

You may also like