Home » Sandhya Theatre Case: ಇಂದು ಪೊಲೀಸ್ ಠಾಣೆಗೆ ಹಾಜರಾದ ನಟ ಅಲ್ಲು ಅರ್ಜುನ್! ಕೋರ್ಟ್ ಸೂಚನೆ

Sandhya Theatre Case: ಇಂದು ಪೊಲೀಸ್ ಠಾಣೆಗೆ ಹಾಜರಾದ ನಟ ಅಲ್ಲು ಅರ್ಜುನ್! ಕೋರ್ಟ್ ಸೂಚನೆ

0 comments

ಜಾಮೀನು ಷರತ್ತುಗಳ ಪ್ರಕಾರ ನಟ ಅಲ್ಲು ಅರ್ಜುನ್‌ಗೆ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಲಯವು ಚಾರ್ಜ್ ಶೀಟ್ ಸಲ್ಲಿಕೆಯಾಗುವವರೆಗೆ ಪ್ರತಿ ಭಾನುವಾರ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿತ್ತು.

Sandhya Theatre Case: ಪುಷ್ಪ 2 ಪ್ರಿಮೀಯರ್‌ ಶೋ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ, ರೆಗ್ಯುಲರ್‌ ಬೇಲ್‌ ದೊರಕಿದ ನಂತರ ನಟ ಅಲ್ಲು ಅರ್ಜುನ್‌ಗೆ ಕೋರ್ಟ್‌ ಭಾನುವಾರ ಪೊಲೀಸ್‌ ಠಾಣೆಗೆ ಹಾಜರಾಗಲು ಸೂಚನೆ ನೀಡಲಾಗಿತ್ತು.

ಸಂಧ್ಯಾ ಥಿಯೇಟರ್ ಪ್ರಕರಣದಲ್ಲಿ ನ್ಯಾಯಾಲಯದಿಂದ ರೆಗ್ಯುಲರ್‌ ಜಾಮೀನು ಪಡೆದ ನಂತರ, ಅಲ್ಲು ಅರ್ಜುನ್ ಶನಿವಾರ (ಜನವರಿ 4, 2024) ನಾಂಪಲ್ಲಿಯ ಮೆಟ್ರೋಪಾಲಿಟನ್ ಕ್ರಿಮಿನಲ್ ನ್ಯಾಯಾಲಯದಲ್ಲಿ ಜಾಮೀನು ಮೊತ್ತವನ್ನು ಠೇವಣಿ ಮಾಡಿದ್ದರು. ದಕ್ಷಿಣ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ರೆಗ್ಯುಲರ್‌ ಜಾಮೀನು ಅರ್ಜಿಯನ್ನು ನಾಂಪಲ್ಲಿ ನ್ಯಾಯಾಲಯವು 30 ಡಿಸೆಂಬರ್ 2024 ರಂದು ವಿಚಾರಣೆ ನಡೆಸಿತು. ಅಂದು ನಿರ್ಧಾರವನ್ನು ಕಾಯ್ದಿರಿಸಲಾಗಿತ್ತು. ಇದರ ನಂತರ, ಜನವರಿ 3, 2025 ರಂದು, ಸಂಧ್ಯಾ ಥಿಯೇಟರ್ ಪ್ರಕರಣದಲ್ಲಿ ನ್ಯಾಯಾಲಯವು ಅವರಿಗೆ ಸಾಮಾನ್ಯ ಜಾಮೀನು ನೀಡಿದೆ.

You may also like