Home » ಸವಣೂರು ಗ್ರಾ.ಪಂ. ನಿಂದ ಗಾಂಧಿ ಜಯಂತಿ ಅಂಗವಾಗಿ ಮೆಸ್ಕಾಂ ಸಿಬಂದಿಗಳಿಗೆ ಗೌರವಾರ್ಪಣೆ

ಸವಣೂರು ಗ್ರಾ.ಪಂ. ನಿಂದ ಗಾಂಧಿ ಜಯಂತಿ ಅಂಗವಾಗಿ ಮೆಸ್ಕಾಂ ಸಿಬಂದಿಗಳಿಗೆ ಗೌರವಾರ್ಪಣೆ

by Praveen Chennavara
0 comments

ಸವಣೂರು ಗ್ರಾಮ ಪಂಚಾಯತ್ ಇದರ ವತಿಯಿಂದ ಸ್ವಾತಂತ್ರ್ಯೊತ್ಸವದ ಅಮೃತ ಮಹೋತ್ಸವದ ಅಂಗವಾಗಿ ಗಾಂಧೀ ಜಯಂತಿಯಂದು ಮೆಸ್ಕಾಂ ಸವಣೂರು ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪವರ್ ಮ್ಯಾನ್ ಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯರಾದ ಗಿರಿಶಂಕರ ಸುಲಾಯ, ಅಬ್ದುಲ್ ರಜಾಕ್, ರಫೀಕ್ ಎಂ.ಎ,ಸತೀಶ್ ಅಂಗಡಿಮೂಲೆ, ಸುಂದರಿ ಬಿ.ಎಸ್,ಬಾಬು ಎನ್,ತೀರ್ಥರಾಮ ಕೆಡೆಂಜಿ, ಭರತ್ ರೈ,ತಾರಾನಾಥ ಸುವರ್ಣ ಬೊಳಿಯಾಲ ,ಸಿಬಂದಿಗಳಾದ ಪ್ರಮೋದ್ ಕುಮಾರ್ ಬಿ, ದಯಾನಂದ ಮಾಲೆತ್ತಾರು,ಯತೀಶ್ ಕುಮಾರ್ ,ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು,ನಝೀರ್ ಮಾಂತೂರು ಮೊದಲಾದವರಿದ್ದರು,ಮೆಸ್ಕಾಂ ಜೆಇ ನಾಗರಾಜ್ ಹಾಗೂ ಸಿಬಂದಿಗಳನ್ನು ಗೌರವಿಸಲಾಯಿತು.

ಪಿಡಿಓ ನಾರಾಯಣ ಬಿ ಸ್ವಾಗತಿಸಿ, ಲೆಕ್ಕ ಸಹಾಯಕ ಎ.ಮನ್ಮಥ ವಂದಿಸಿದರು.

You may also like

Leave a Comment