ಕಡಬ : ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಸರಕಾರ ಜಾರಿಗೊಳಿಸಿದ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಅನಗತ್ಯವಾಗಿ ರಸ್ತೆಗಿಳಿದವರಿಗೆ ಕಡಬ ತಾಲೂಕಿನ ಸವಣೂರಿನಲ್ಲಿ ಪೊಲೀಸರು ದಂಡ ವಿಧಿಸಿದರು.
ಅಲ್ಲದೆ ಮಾಸ್ಕ್ ಹಾಕದವರಿಗೆ ದಂಡ ವಿಧಿಸಿ,ಮಾಸ್ಕ್ ವಿತರಿಸುವ ಮೂಲಕ ಪೊಲೀಸರು ಗಮನ ಸೆಳೆದರು.
ಬೆಳ್ಳಾರೆ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ವಸಂತ ಗೌಡ ನೂಜಿ,ಜಗದೀಶ ಟಿ.ಗೌಡ ಅವರು ಮಾಸ್ಕ್ ವಿತರಿಸಿ ಗಮನಸೆಳೆದರು. ಗ್ರಾ.ಪಂ.ಅಭಿವೃದ್ದಿ ಅಽಕಾರಿ ಮನ್ಮಥ ಎ ಹಾಗೂ ಸಿಬಂದಿಗಳು ಹಾಜರಿದ್ದರು.