Home » ಸವಣೂರು : ವಿದ್ಯಾರಶ್ಮಿಯಲ್ಲಿ ಪ. ಪೂ. ವಿಭಾಗದ ಮಕ್ಕಳಿಗೆ ಜಾಗೃತಿ ತರಬೇತಿ

ಸವಣೂರು : ವಿದ್ಯಾರಶ್ಮಿಯಲ್ಲಿ ಪ. ಪೂ. ವಿಭಾಗದ ಮಕ್ಕಳಿಗೆ ಜಾಗೃತಿ ತರಬೇತಿ

by Praveen Chennavara
0 comments

ಸವಣೂರು : ಕರ್ನಾಟಕ ಸರಕಾರವು ಪ. ಫೂ. ವಿಭಾಗದ ಮಕ್ಕಳಿಗಾಗಿ ವಿಶೇಷವಾಗಿ
ತಾರುಣ್ಯಾವಸ್ಥೆಯಲ್ಲಿ ಹದಿಹರೆಯದ ಸಮಸ್ಯೆಗಳು ಎಂಬ ವಿಷಯದ ಕುರಿತಾಗಿ ಆಯೋಜಿಸಿದ್ದ
ಜಾಗೃತಿ-ಅರಿವು ವೆಬಿನಾರ್”ನಲ್ಲಿ ಎಲ್ಲಾ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡರು.

ಸಂಚಾಲಕರಾದ ಕೆ. ಸೀತಾರಾಮ ರೈ ಸವಣೂರು, ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಹಾಗೂ ಪ್ರಾಂಶುಪಾಲ ಸೀತಾರಾಮ ಕೇವಳ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮವನ್ನು ಉಪ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಸಂಯೋಜಿಸಿದ್ದರು. ಪ. ಪೂ. ವಿಭಾಗದ ಸಂಯೋಜಕಿ ಕಸ್ತೂರಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಪೂ. ಗಂಟೆ 11.30ರಿಂದ ಅಪರಾಹ್ನ ಗಂಟೆ 1.45ರವರೆಗೆ ನಡೆದ ವೆಬಿನಾರ್”ನಲ್ಲಿ ಮಕ್ಕಳು
ಪೋಕ್ಸೋ ಕಾಯಿದೆ, ಬಾಲ್ಯ ವಿವಾಹ ಮತ್ತು ಆನ್ಲೈನ್ ಸುರಕ್ಷತೆ ಕುರಿತಾಗಿ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಂಡರು.

You may also like

Leave a Comment