Viral News: ಈ ಭೂಮಿ ಮೇಲೆ ಎಲ್ಲರಿಗೂ ಬದುಕುವ ಹಕ್ಕಿದೆ. ಹಾಗೆ ಕಾಡುಗಳಲ್ಲಿ ಈಗಲೂ ಅನೇಕ ರೀತಿಯ ಬುಡಕಟ್ಟು ಸಮುದಾಯಗಳು ವಾಸಿಸುತ್ತಿವೆ. ಅವರು ತಾವು ವಾಸಿಸುವ ಜಾಗವನ್ನು ತುಂಬಾ ಪ್ರೀತಿಸುತ್ತಾರೆ. ಹಾಗೆ ಅದನ್ನು ಜತನದಿಂದ ಕಾಯುದುಕೊಳ್ಳುತ್ತಾರೆ. ಈ ಕಾಡುಜನರು ಕಾಡಿನಲ್ಲಿ ಏನು ಸಿಗುತ್ತದೂ ಅಷ್ಟರಲ್ಲಿ ತೃಪ್ತಿ ಜೀವನ ನಡೆಸುತ್ತಾರೆ. ಊರಲ್ಲಿ ಬದುಕುವ ಸಾಮಾನ್ಯ ಜನರಿಗೆ ಈ ಬುಡಕಟ್ಟು ಸಮುದಾಯಗಳ ಬಗ್ಗೆ ಅಷ್ಟೇನು ಮಾಹಿತಿ ಇಲ್ಲ. ಅಂತಹ ಒಂದು ಬುಡಕಟ್ಟು ಜನಾಂಗದ ಕುರಿತು ಇತ್ತೀಚೆಗೆ ಬಹಳ ಚರ್ಚೆಯಾಗುತ್ತಿದೆ.
ಈ ವಿಷಯ ಬಂದಿರೋದು ಪಪುವಾ ನ್ಯೂಗಿನಿಯಾ ಎಂಬ ಪ್ರದೇಶದಿಂದ. ಅಲ್ಲಿ ವ್ಯಕ್ತಿಯೊಬ್ಬ ಅಲ್ಲಿನ ತೋವೈ ಬುಡಕಟ್ಟಿನ ಜನರೊಂದಿಗೆ ಕುಳಿತಿರುವ ವೀಡಿಯೋ ಇತ್ತೀಚೆಗೆ ವೈರಲ್ ಆಗಿದೆ. ಈ ಜನರು ಆ ದಟ್ಟ ಕಾನನದಲ್ಲಿರುವ ಪವಿತ್ರ ಜಲಪಾತವನ್ನು ರಕ್ಷಿಸಲು ಕುಳಿತಿದ್ದಾರಂತೆ. ಈ ಕಾಡಿಗೆ ಹೋಗಿ ಈ ಜಲಪಾತದಲ್ಲಿ ಜಲಕ್ರೀಡೆ ಆಡಬಹುದು ಎಂದುಕೊಂಡರೆ ನಿಮ್ಮ ಹೆಣ ಬೀಳೋದು ಪಕ್ಕಾ. ಹೊರಗಿನಿಂದ ಬಂದವರು ಈ ಜಲಪಾತವನ್ನು ಯಾರೂ ಮುಟ್ಟುವಂತಿಲ್ಲ..! ಹಾಗೆ ಇದನ್ನು ಕಾಯೋ ಈ ಕಾಡು ಜನರ ಗೆಟಪ್ ನೋಡಿದ್ರೆ ಭಯಾನಕವಾಗಿದೆ.
ಭಯಾನಕ ದೆವ್ವದ ರೀತಿಯಲ್ಲಿ ಮುಖವಾಡ ಹಾಗೂ ಘೋಸ್ಟ್ ಡ್ರೆಸ್ ಹಾಕಿಕೊಂಡು ಈ ಜಲಪಾತವನ್ನು ಬಹಳ ಮುತುವರ್ಜಿಯಿಂದ ಕಾಯುತ್ತಾರೆ. ಒಂದು ವೇಳೆ ಯಾರಾದರು ಈ ಜಲಪಾತಕ್ಕೆ ಇಳಿಯುವ ಪ್ರಯತ್ನ ಮಾಡಿದರೆ ಅವರು ಅಲ್ಲೇ ಖಲಾಸ್. ಈ ಬಗ್ಗೆ ವೀಡಿಯೋ ಮಾಡಿದ ವ್ಯಕ್ತಿಯ ಹೆಸರು ಡೇನಿಯಲ್. ಐದು ಕೋಟಿಗೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಈ ರೀಲ್ 5 ಕೋಟಿ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಮತ್ತು 10 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.
