Home News Scholarship: ರಾಜ್ಯದ ‘ಪದವಿ’ ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್ : ದೀಪಿಕಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Scholarship: ರಾಜ್ಯದ ‘ಪದವಿ’ ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್ : ದೀಪಿಕಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Scholarship for ITI, Diploma Students
Image source: Indiafilings

Scholarship: ಪದವಿ ಅಥವಾ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗಾಗಿ ‘ದೀಪಿಕಾ ವಿದ್ಯಾರ್ಥಿವೇತನ” ಯೋಜನೆಯಡಿ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.ಜ.30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ದೀಪಿಕಾ ವಿದ್ಯಾರ್ಥಿ ವೇತನವು ಕರ್ನಾಟಕ ಸರ್ಕಾರ ಹಾಗೂ ಅಜೀಂ ಪ್ರೇಮ್ಜಿ ಫೌಂಡೇಶನ್ ಸಹಭಾಗಿತ್ವದಲ್ಲಿ ಭಾರತದಲ್ಲಿ ಬಾಲಕಿಯರ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ಜಾರಿಗೊಳಿಸಲಾದ ಯೋಜನೆಯಾಗಿದೆ.

ಈ ಯೋಜನೆಯಲ್ಲಿ ವಿದ್ಯಾರ್ಥಿನಿಯರಿಗೆ ವಾರ್ಷಿಕ ರೂ.30,000/- ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಈ ವಿದ್ಯಾರ್ಥಿ ವೇತನವನ್ನು ಅವರ ಮೊದಲ ಪದವಿ ಅಥವಾ ಡಿಪ್ಲೋಮೋ ಕಾರ್ಯಕ್ರಮದ ಪೂರ್ಣ ಅವಧಿಗೆ ನೀಡಲಾಗುವುದು.

ಆಸಕ್ತ ವಿದ್ಯಾರ್ಥಿನಿಯರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, 10ನೇ ತರಗತಿ ಹಾಗೂ 12ನೇ ತರಗತಿಯ ಅಂಕಪಟ್ಟಿ, 2025-26ನೇ ಸಾಲಿಗೆ ಪ್ರಥಮ ವರ್ಷದ ಪದವಿ ಅಥವಾ ಡಿಪ್ಲೊಮಾಗೆ ದಾಖಲಾಗಿರುವ ಬಗ್ಗೆ ಬೋನೋಫೈಡ್ (ದಾಖಲಾತಿ ನೈಜತೆ ಪ್ರಮಾಣ ಪತ್ರ) ಅಥವಾ ಬೋಧನಾ ಶುಲ್ಕದ ರಸೀದಿ, ಭಾವಚಿತ್ರ, ಸಹಿ ಅರ್ಜಿಯೊಂದಿಗೆ ಜ.30ರ ಒಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.