Home » ಈ ಶಾಲೆಯಲ್ಲಿ ಓದಿದವರಿಗೆ ಕ್ಯಾನ್ಸರ್ !

ಈ ಶಾಲೆಯಲ್ಲಿ ಓದಿದವರಿಗೆ ಕ್ಯಾನ್ಸರ್ !

by Praveen Chennavara
0 comments

ಅಮೆರಿಕದ ನಗರ ನ್ಯೂಜೆರ್ಸಿಯ ವುಡ್ ಬ್ರಿಡ್ಜ್ ಪ್ರೀತ್ಯದಲ್ಲಿರುವ ಕೊಲೊನಿಯಾ ಹೈಸ್ಕೂಲ್‌ನಲ್ಲಿ ಓದಿದ್ದ ವಿದ್ಯಾರ್ಥಿಗಳಲ್ಲಿ ಸುಮಾರು 100 ಜನರಿಗೆ ಗ್ಲಿಬೋಬ್ಲಾಸ್ಟೋಮಾ ಎಂಬ ಮೆದುಳಿನ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಈ ಕುರಿತಂತೆ ಸ್ಥಳೀಯ ಸರಕಾರ ತನಿಖೆಗೆ ಆದೇಶಿಸಿದೆ.

ಗಮನಾರ್ಹ ವಿಚಾರವೆಂದರೆ, ಈ ಶಾಲೆಯಲ್ಲಿ ವ್ಯಾಸಂಗ ಮಾಡಿ ಈಗ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಲವರಲ್ಲಿ ಈ ರೋಗ ಕಾಣಿಸಿಕೊಂಡಿದೆ.

ಅಮೆರಿಕದ ನರವಿಜ್ಞಾನ ಶಸ್ತ್ರಚಿಕಿತ್ಸಕರ ಸಂಘದ ಅಭಿಪ್ರಾಯದ ಪ್ರಕಾರ, ಪ್ರತಿ ಒಂದು ಲಕ್ಷ ಜನರಲ್ಲಿ ಇಬೋಬ್ಲಾಸ್ಫೋಮಾ ಕೇವಲ ಶೇ. 3.21 ರಷ್ಟು ಜನರಲ್ಲಿ ಮಾತ್ರ ಬರುತ್ತದೆ.

ಆದರೆ, ಕೂಲಪನಿಯಾ ಹೈಸ್ಕೂಲ್‌ನಲ್ಲಿ 1975 ರಿಂದ 2000 ಅವಧಿಯಲ್ಲಿ ಓದಿದ ಸುಮಾರು 102 ಜನರಲ್ಲಿ ಈ ರೋಗ ಕಾಣಿಸಿಕೊಂಡಿರುವುದು ವಿಚಿತ್ರವೆನಿಸಿದೆ ಎಂದು ಸಂಸ್ಥೆ ಹೇಳಿದೆ. ಅದಕ್ಕಾಗಿ ಈಗ ತನಿಖೆಗೆ ಆದೇಶಿಸಲಾಗಿದೆ. ಅಲ್ಲಿನ ನೆಲ, ನೀರು ಆಹಾರ ಮತ್ತು ಸುತ್ತ ಇರಬಹುದಾದ ವಿಕಿರಣದ ಕಿರಣಗಳ ಸಂಶೋಧನೆ ನಡೆಸುವ ಉದ್ದೇಶ ಇದೆ ಎನ್ನಲಾಗುತ್ತಿದೆ.

You may also like

Leave a Comment