School Holiday: ಈಗಾಗಲೇ ಶ್ರಾವಣ ಮಾಸ ಶುರುವಾದ ಹಿನ್ನೆಲೆ ಸಾಲು ಸಾಲು ಹಬ್ಬಗಳು ಬಂದಿದ್ದ ಸಂದರ್ಭ ಕರ್ನಾಟಕ ರಾಜ್ಯದಲ್ಲಿ ಶಾಲಾ ಮತ್ತು ಕಾಲೇಜುಗಳ ಸಿಬ್ಬಂದಿ ಸದಾ ರಜೆಯನ್ನೆ ಬಯಸುವ ಮಕ್ಕಳಿಗೆ ಖುಷಿಯೋ ಖುಷಿ. ಈಗ ಹಬ್ಬ ಸೇರಿ ಹಲವು ಕಾರಣಗಳಿಗೆ ಸಾಲಾಗಿ ರಜೆಗಳು ಘೋಷಣೆಯಾಗಿವೆ. ಇದೀಗ ನಾಳೆ ಸೆಪ್ಟೆಂಬರ್ 15 ಸೋಮವಾರದಂದು ಉಡುಪಿ ಜಿಲ್ಲೆಯ ಶಾಲಾ & ಕಾಲೇಜುಗಳಿಗೆ ವಿಶೇಷ ಕಾರಣಕ್ಕಾಗಿ ರಜೆ (School Holiday) ನೀಡಲಾಗಿದೆ.
ಹೌದು, ಸೆಪ್ಟೆಂಬರ್ 15 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆಗೆ ಕಾರಣ ಏನು ಅನ್ನೋದು ಉಡುಪಿಯ ಒಂದು ವಿಶೇಷ ಅಂತಲೇ ಹೇಳಬಹುದು. ನಾಳೆ ಕೃಷ್ಣ ಭೂಮಿ ಉಡುಪಿಯಲ್ಲಿ ಕೃಷ್ಣ ಲೀಲೋತ್ಸವಕ್ಕೆ (ವಿಟ್ಲಪಿಂಡಿ) ಭರದ ಸಿದ್ಧತೆ ನಡೆಯುತ್ತಿದೆ. ಇನ್ನು ಪಿಲಿವೇಶ ಕುಣಿತ ತಂಡಗಳು ರಾಜ್ಯವೇ ತಿರುಗಿ ನೋಡುವಂತೆ ಡೋಲು ಬಾರಿಸಿ ಕುಣಿಯಲು ಸಿದ್ಧವಾಗಿದೆ. ಜೊತೆಗೆ ಮೊಸರು ಕುಡಿಕೆ ಉತ್ಸವಕ್ಕೆ ರಥಬೀದಿಯಲ್ಲಿ ತಯಾರಿ ನಡೆಯುತ್ತಿದೆ. ಒಟ್ಟಿನಲ್ಲಿ ಸೋಮವಾರದ ವಿಟ್ಲಪಿಂಡಿಗಾಗಿ ಲಕ್ಷಾಂತರ ಉಂಡೆ, ಚಕ್ಕುಲಿ ತಯಾರಾಗುತ್ತಿವೆ. ರಥಬೀದಿಯಲ್ಲಿ ಮೊಸರು ಕುಡಿಕೆ ಉತ್ಸವಕ್ಕೆ 13 ಗುರ್ಜಿಗಳನ್ನು ನಿರ್ಮಿಸಲಾಗಿದ್ದು, ಅವುಗಳಲ್ಲಿ 47 ಮಣ್ಣಿನ ಕುಡಿಕೆಗಳನ್ನು ಇರಿಸಲಾಗಿದೆ. ಸೆಪ್ಟೆಂಬರ್ 14 ರಂದು ಕೃಷ್ಣ ವೇಷ ಸ್ಪರ್ಧೆ, ಕೃಷ್ಣ ಜಯಂತಿ, ಮತ್ತು ಸೆಪ್ಟೆಂಬರ್ 15 ರಂದು ಕೃಷ್ಣ ಲೀಲೋತ್ಸವವು ನಡೆಯಲಿದ್ದು, ಈ ಪ್ರಯುಕ್ತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ವಿಟ್ಲ ಪಿಂಡಿ ಉತ್ಸವ ಉಡುಪಿಯಲ್ಲಿ ಭಾರಿ ಜನಪ್ರಿಯತೆ ಹೊಂದಿದ್ದು, ಈ ಪ್ರಯುಕ್ತ ಶಾಲಾ ಕಾಲೇಜುಗಳಿಗೆ ಮಾತ್ರವಲ್ಲದೆ ಉಡುಪಿ ಜಿಲ್ಲೆಯ ಉದ್ಯಮಗಳು, ಫ್ಯಾಕ್ಟರಿಗಳು ಕೂಡಾ ನಾಳಿನ ದಿನ ಬಹುತೇಕ ಬಂದ್ ಆಗಿರಲಿದೆ.
