Home » Dharmasthala Case: ಧರ್ಮಸ್ಥಳ ಬುರುಡೆ ಪ್ರಕರಣ: ಗುರುತಿಸದ ಸ್ಥಳದಲ್ಲಿ ಶೋಧಕಾರ್ಯ, ಬಂಗ್ಲಗುಡ್ಡಕ್ಕೆ ಮತ್ತೋರ್ವ ಅನಾಮಿಕ ವ್ಯಕ್ತಿ ಆಗಮನ?

Dharmasthala Case: ಧರ್ಮಸ್ಥಳ ಬುರುಡೆ ಪ್ರಕರಣ: ಗುರುತಿಸದ ಸ್ಥಳದಲ್ಲಿ ಶೋಧಕಾರ್ಯ, ಬಂಗ್ಲಗುಡ್ಡಕ್ಕೆ ಮತ್ತೋರ್ವ ಅನಾಮಿಕ ವ್ಯಕ್ತಿ ಆಗಮನ?

0 comments

Dharmasthala Case: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಶೋಧಕಾರ್ಯ ಮುಂದುವರೆಸಿದೆ. ಇಲ್ಲಿಯವರೆಗೂ ಗುರುತಿಸದ ಸ್ಥಳದಲ್ಲಿ ಎಸ್‌ಐಟಿ ತಂಡ ಶೋಧಕಾರ್ಯ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ದೂರುದಾರ ಗುರುತು ಮಾಡದ ಬಂಗ್ಲಗುಡ್ಡದ ಮತ್ತೊಂದು ಸ್ಥಳದಲ್ಲಿ ಶವ ಹೂತಿಟ್ಟ ಕುರಿತು ಮಾಹಿತಿ ನೀಡಿದ್ದು, ಅಲ್ಲಿ ನಡೆದ ಶೋಧದ ಸಂದರ್ಭದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿತ್ತು. ಇಂದು 13ನೇ ಸ್ಥಳದಲ್ಲಿ ಶೋಧ ನಡೆಸುವ ಬದಲು ಬಂಗ್ಲಗುಡ್ಡದ ಸ್ಥಳದಲ್ಲಿ 11A ಎಂದು ಸ್ಥಳ ಪತ್ತೆ ಮಾಡಿ ಎಸ್‌ಐಟಿ ಶೋಧಕಾರ್ಯ ಮಾಡಿದೆ ಎಂದು ವರದಿಯಾಗಿದೆ.

ಎಸ್‌ಐಟಿ ಶೋಧಕಾರ್ಯ ಸಂದರ್ಭ ಮತ್ತೋರ್ವ ಅನಾಮಿಕ ವ್ಯಕ್ತಿ ಬಂಗ್ಲಗುಡ್ಡಕ್ಕೆ ಆಗಮಿಸಿದ್ದು, ಶವಗಳನ್ನು ಹೂತುಹಾಕಲು ದೂರುದಾರನಿಗೆ ಸಹಾಯ ಮಾಡಿದ್ದ ಎನ್ನಲಾದ ವ್ಯಕ್ತಿ ಆಗಮಿಸಿದ್ದು, ಆತನ ಸಮ್ಮುಖದಲ್ಲಿ ಮಣ್ಣು ಅಗೆದು ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Pak-America: ಅಮೆರಿಕ-ಪಾಕಿಸ್ತಾನ ಸಂಬಂಧಗಳು ‘ಅಲ್ಪಾವಧಿಯ ಗದ್ದಲ’- ಚೀನಾ ತಜ್ಞರು

You may also like