Home » Today Womens Day: ಇಂದು ಮೋದಿಗೆ ಮಹಿಳಾ ಸಿಬ್ಬಂದಿ ಭದ್ರತೆ!

Today Womens Day: ಇಂದು ಮೋದಿಗೆ ಮಹಿಳಾ ಸಿಬ್ಬಂದಿ ಭದ್ರತೆ!

0 comments

Narendra Modi: ಅಂತರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಇಂದು (ಶನಿವಾರ) ಮಾರ್ಚ್‌ 8 ಪ್ರಧಾನಿ ಮೋದಿ ಅವರ ಗುಜರಾತ್‌ ಕಾರ್ಯಕ್ರಮಕ್ಕೆ ಮಹಿಳಾ ಪೊಲೀಸ್‌ ಸಿಬ್ಬಂದಿ ಭದ್ರತೆ ಒದಗಿಸಲಿದ್ದಾರೆ.

ವಾಂರಿಯ ವನ್ಸಿ ಬೋರ್ಸಿ ಗ್ರಾಮದಲ್ಲಿ “ಲಖ್‌ಪತಿ ದೀದಿ ಸಮ್ಮೇಳನ” ನಡೆಯಲಿದ್ದು, ಇದರಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಹೆಲಿಪ್ಯಾಡ್‌ನಿಂದ ಹಿಡಿದು ಕಾರ್ಯಕ್ರಮದ ಸ್ಥಳದವರೆಗೆ ಸಂಪೂರ್ಣ ಮಹಿಳಾ ಪೊಲೀಸ್‌ ಸಿಬ್ಬಂದಿಯೇ ಭದ್ರತೆ ಒದಗಿಸಲಿದ್ದಾರೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಹರ್ಷ ಸಾಂಘ್ವಿ ಮಾಹಿತಿ ನೀಡಿದ್ದಾರೆ.

ಮಹಿಳಾ ದಿನದ ಅಂಗವಾಗಿ ಗುಜರಾತ್‌ ಪೊಲೀಸರು ಈ ವಿಶೇಷ ಉಪಕ್ರಮ ಆಯೋಜನೆ ಮಾಡಿದ್ದಾರೆ.

2100 ಮಹಿಳಾ ಕಾನ್‌ಸ್ಟೇಬಲ್‌ಗಳು, 187 ಸಬ್‌ಇನ್ಸ್‌ಪೆಕ್ಟರ್‌ಗಳು, 61 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳು, 16ಡಿಎಸ್ಪಿಗಳು, 5 ಎಸ್ಪಿಗಳು, 1ಐಜಿಪಿ, 1 ಹೆಚ್ಚುವರಿ ಡಿಜಿಪಿ ಹುದ್ದೆಯ ಅಧಿಕಾರಿಗಳು ಪ್ರಧಾನಿ ಮೋದಿಗೆ ಭದ್ರತೆ ನೀಡಲಿರುವ ಕುರಿತು ಮಾಹಿತಿ ನೀಡಲಾಗಿದೆ.

You may also like