Home » ವಿವಾಹಿತೆಯೊಂದಿಗೆ ಸೆಲ್ಫಿ ತೆಗೆದುಕೊಂಡು ವಾಟ್ಸಪ್ ನಲ್ಲಿ ಹೆತ್ತವರಿಗೆ ಫಾರ್ವರ್ಡ್ ಮಾಡಿದ ಯುವಕ | ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣು

ವಿವಾಹಿತೆಯೊಂದಿಗೆ ಸೆಲ್ಫಿ ತೆಗೆದುಕೊಂಡು ವಾಟ್ಸಪ್ ನಲ್ಲಿ ಹೆತ್ತವರಿಗೆ ಫಾರ್ವರ್ಡ್ ಮಾಡಿದ ಯುವಕ | ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣು

0 comments

ವಿವಾಹಿತೆಯೊಂದಿಗೆ ಸೆಲ್ಪಿ ತೆಗೆದುಕೊಂಡಿದ್ದ ಯುವಕ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಹಿನ್ನೆಲೆಯಲ್ಲಿ ಮನನೊಂದ ಮಹಿಳೆ ನೇಣಿಗೆ ಶರಣಾದ ಘಟನೆ ಹಗರಿಬೊಮ್ಮನಹಳ್ಳಿಯಲ್ಲಿ ನಡೆದಿದೆ.

ತಾಲೂಕಿನ ಹಿರೇಸೊಟಿ ಗ್ರಾಮದ ರುದ್ರಪ್ಪ ಅವರ ಪುತ್ರಿ
ಶೀಲಮ್ಮ ಯಾನೆ ಲಲಿತಾ (24) ಮೃತಪಟ್ಟವರು.

ಯುವಕ ಸೊನ್ನ ಗ್ರಾಮಕ್ಕೆ ತೆರಳಿ
ಕೃಷಿಭೂಮಿಯಲ್ಲಿದ್ದ ಮಹಿಳೆಯೊಂದಿಗೆ ಸೆಲ್ಫಿ ತೆಗೆದುಕೊಂಡು ಮಹಿಳೆಯ ತವರು ಮನೆಯವರ ವಾಟ್ಸಪ್ ಗೆ ಸಹಿತ ಇತರರಿಗೆ ಕಳುಹಿಸಿದ್ದಾನೆ.

ವಿಷಯ ತಿಳಿದ ಮಹಿಳೆಯ ತಂದೆ, ಮಗಳನ್ನು ಈ ಬಗ್ಗೆ ವಿಚಾರಿಸಿದ್ದಾರೆ. ಇದರಿಂದ ಆತಂಕ ಹಾಗೂ ಅವಮಾನದಿಂದ ಲಲಿತಾ ನೇಣಿಗೆ
ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment