Home » Aravind crazywall: ಬಿಜೆಪಿ ಹಿರಿಯ ನಾಯಕ ಬ್ರಹ್ಮ್ ಸಿಂಗ್‌ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ

Aravind crazywall: ಬಿಜೆಪಿ ಹಿರಿಯ ನಾಯಕ ಬ್ರಹ್ಮ್ ಸಿಂಗ್‌ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ

1 comment

Aravind crazywall: ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರ ಸಮ್ಮುಖದಲ್ಲಿ, ಬಿಜೆಪಿ ಹಿರಿಯ ನಾಯಕ ಮತ್ತು ಮೂರು ಬಾರಿ ಶಾಸಕರಾಗಿದ್ದ ಬ್ರಹ್ಮ್ ಸಿಂಗ್ ತಂವರ್ ಅವರು ಗುರುವಾರ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ)ಗೆ ಸೇರ್ಪಡೆಯಾಗಿದ್ದಾರೆ. ಮುಖ್ಯವಾಗಿ ಇಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಬ್ರಹ್ಮ್ ಸಿಂಗ್ ಮತ್ತು ಅವರ ಸಹಚರರು ಎಎಪಿಗೆ ಸೇರ್ಪಡೆಯಾಗಿದ್ದಾರೆ.

‘ಬ್ರಹ್ಮ್‌ ಸಿಂಗ್ ಅವರು ದೆಹಲಿಯ ದೊಡ್ಡ ನಾಯಕರಾಗಿದ್ದು, ಛತ್ತರ್‌ಪುರ ಮತ್ತು ಮೆಹ್ರೌಲಿ ಕ್ಷೇತ್ರಗಳಿಂದ ಮೂರು ಬಾರಿ ಶಾಸಕರಾಗಿದ್ದರು. ಅವರ ಸೇರ್ಪಡೆಯು ಎಎಪಿ ಪಕ್ಷಕ್ಕೆ ಮತ್ತಷ್ಟು ಬಲತುಂಬಿದೆ’ ಎಂದು ಅರವಿಂದ ಕೇಜ್ರಿವಾಲ್‌ (Aravind crazywall) ಅಭಿಪ್ರಾಯ ತಿಳಿಸಿದ್ದಾರೆ.

ಪಕ್ಷ ಸೇರುವ ವೇಳೆ,’ಕೇಜ್ರಿವಾಲ್‌ ಅವರ ಕಾರ್ಯಶೈಲಿ ಮತ್ತು ಜನರಿಗಾಗಿ ಕೆಲಸ ಮಾಡುವ ಅವರ ಉತ್ಸಾಹದಿಂದ ಪ್ರಭಾವಿತನಾಗಿದ್ದು, ಎಎಪಿಗಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತೇನೆ’ ಎಂದು ಬ್ರಹ್ಮ್ ಸಿಂಗ್ ಭರವಸೆ ನೀಡಿದರು.

You may also like

Leave a Comment