ಈಗಾಗಲೇ ಹೊಸ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರವು ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಹೆಚ್ಚಳ ಘೋಷಿಸಿತ್ತು. ಇದೀಗ ಪರಿಷ್ಕೃತ ಬಡ್ಡಿ ದರ ಚಾಲ್ತಿಗೆ ಬಂದಿದ್ದು, ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಶೇಕಡಾ 8ರ ವರೆಗೆ ಬಡ್ಡಿ ಪಡೆಯಬಹುದಾಗಿದೆ. ಹೌದು ಒಂದು ವರ್ಷದ ಟೈಮ್ ಡಿಪಾಸಿಟ್ ಬಡ್ಡಿ ದರವನ್ನು ಶೇ 5.5ರಿಂದ ಶೇ 6.6ಕ್ಕೆ ಹೆಚ್ಚಿಸಲಾಗಿದೆ. ಇದು ಎಸ್ಬಿಐ ಒಂದು ವರ್ಷದ ಟೈಮ್ ಡಿಪಾಸಿಟ್ ಬಡ್ಡಿಗಿಂತಲೂ (ಶೇ 5.75) ಹೆಚ್ಚಾಗಿದೆ.
ಪ್ರಸ್ತುತ ಹಿರಿಯ ನಾಗರಿಕರ ಉಳಿತಾಯ ಯೋಜನೆ ಠೇವಣಿ ಅಥವಾ ಎಸ್ಸಿಎಸ್ಎಸ್ ಬಡ್ಡಿ ದರ ಈಗ ಶೇ 8 ಆಗಿದೆ. ಅಂದರೆ ಇದು ಬ್ಯಾಂಕ್ಗಳು ಹಿರಿಯ ನಾಗರಿಕರ ಠೇವಣಿಗೆ ನೀಡುವ ಬಡ್ಡಿಗಿಂತಲೂ 50ರಿಂದ 75 ಮೂಲಾಂಶದಷ್ಟು ಹೆಚ್ಚಾಗಿದೆ.
ಅದಲ್ಲದೆ ಎರಡು ವರ್ಷ ಅವಧಿಯ ಅಂಚೆ ಕಚೇರಿ ಡಿಪಾಸಿಟ್ ಯೋಜನೆ ಬಡ್ಡಿಯನ್ನು ಶೇ 5.7ರಿಂದ ಶೇ 6.8ಕ್ಕೆ ಹೆಚ್ಚಿಸಲಾಗಿದೆ. ಎಸ್ಬಿಐನಲ್ಲಿ ಇದು ಶೇ 6.75ರಷ್ಟಿದೆ. ದೀರ್ಘಾವಧಿಗೆ, 5 ವರ್ಷಗಳ ಅಂಚೆ ಕಚೇರಿ ಉಳಿತಾಯ ಯೋಜನೆಯ ಬಡ್ಡಿಯನ್ನು ಶೇ 7ಕ್ಕೆ ಹೆಚ್ಚಿಸಲಾಗಿದೆ. ಎಸ್ಬಿಐನಲ್ಲಿ 5ರಿಂದ 10 ವರ್ಷ ಅವಧಿಯ ಠೇವಣಿಗೆ ಶೇ 6.25ರ ಬಡ್ಡಿಯಷ್ಟೇ ಇದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ ಠೇವಣಿ ಅಥವಾ ಎಸ್ಸಿಎಸ್ಎಸ್ ಬಡ್ಡಿ ದರ ಈಗ ಶೇ 8 ಆಗಿದೆ. ಇದು ಬ್ಯಾಂಕ್ಗಳು ಹಿರಿಯ ನಾಗರಿಕರ ಠೇವಣಿಗೆ ನೀಡುವ ಬಡ್ಡಿಗಿಂತಲೂ 50ರಿಂದ 75 ಮೂಲಾಂಶದಷ್ಟು ಹೆಚ್ಚಾಗಿದೆ. 60 ವರ್ಷ ಮೇಲ್ಪಟ್ಟವರು ಈ ಠೇವಣಿ ಇಡಬಹುದಾಗಿದೆ. 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, 55 ವರ್ಷ ಮೇಲ್ಪಟ್ಟವರಾದರೆ ಸ್ವಯಂ ನಿವೃತ್ತಿ ಯೋಜನೆಯಡಿ ಠೇವಣಿ ಇಡಬಹುದಾಗಿದೆ. ನಿವೃತ್ತಿ ಸೌಲಭ್ಯ ದೊರೆತ ಒಂದು ತಿಂಗಳ ಒಳಗಾಗಿ ಠೇವಣಿ ಇಡದಿದ್ದರೆ ನಂತರ ಅವಕಾಶ ಸಿಗಲಾರದು ಎಂಬುದನ್ನು ಗಮನಿಸಬೇಕು.
ಈ ಠೇವಣಿಗೆ ಐದು ವರ್ಷಗಳ ಲಾಕ್ ಇನ್ ಅವಧಿ ಇದೆ. ಠೇವಣಿ ಆರಂಭಿಸಿದ 3 ವರ್ಷಗಳ ನಂತರವಷ್ಟೇ ಲಾಕ್ ಇನ್ ಅವಧಿ ವಿಸ್ತರಣೆಗೆ ಮನವಿ ಸಲ್ಲಿಸಲು ಅವಕಾಶವಿದೆ. ಕನಿಷ್ಠ 1,000 ರೂ.ನಿಂದ 15 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ.
ಒಟ್ಟಿನಲ್ಲಿ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.
