Home » Senior Citizens : ಹಿರಿಯ ನಾಗರಿಕರೇ ನಿಮಗೊಂದು ಭರ್ಜರಿ ಸಿಹಿ ಸುದ್ದಿ | ಕೇಂದ್ರದಿಂದ ಮಹತ್ವದ ಸೂಚನೆ

Senior Citizens : ಹಿರಿಯ ನಾಗರಿಕರೇ ನಿಮಗೊಂದು ಭರ್ಜರಿ ಸಿಹಿ ಸುದ್ದಿ | ಕೇಂದ್ರದಿಂದ ಮಹತ್ವದ ಸೂಚನೆ

0 comments

ಹೊಸ ವರ್ಷದ ಹೊಸ್ತಿಲಲ್ಲೇ ಕೇಂದ್ರದಿಂದ ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸೊಂದು ಸಿಕ್ಕಿದೆ. ಸರ್ಕಾರದ ಯೋಜನೆಯ ಲಾಭ ಪಡೆಯುತ್ತಿದ್ದವರಿಗೆ ಇಂದಿನಿಂದ ಹೆಚ್ಚಿನ ಹಣ ಲಭ್ಯವಾಗಲಿದೆ.‌ ಸರ್ಕಾರ ಇತ್ತೀಚೆಗೆ ಸಣ್ಣ ಉಳಿತಾಯ ಯೋಜನೆಯ ಬಡ್ಡಿ ದರವನ್ನು ಹೆಚ್ಚಿಸಿದ್ದು, ಈ ಬದಲಾವಣೆ ನಂತರ ಉದ್ಯೋಗಿಗಳಿಗೆ ಶೇ. 8 ರ ದರದಲ್ಲಿ ಬಡ್ಡಿ ಸಿಗುತ್ತದೆ. ಇನ್ನೂ, ಈ ಹೊಸ ಬಡ್ಡಿದರಗಳು ಇಂದಿನಿಂದ ಜಾರಿಯಾಗಲಿದೆ ಎಂದು ಹಣಕಾಸು ಸಚಿವಾಲಯ ಅಧಿಸೂಚನೆ ಮೂಲಕ ಮಾಹಿತಿ ನೀಡಿದೆ.

ಅಧಿಸೂಚನೆಯ ಪ್ರಕಾರ, ಈ ಹಿಂದೆ ಸರ್ಕಾರ ಹಿರಿಯ ನಾಗರೀಕರ ಉಳಿತಾಯ ಯೋಜನೆಯಲ್ಲಿ ಶೇಕಡಾ 7.6 ರ ದರದಲ್ಲಿ ಬಡ್ಡಿಯ ಲಾಭವನ್ನು ನೀಡುತ್ತಿತ್ತು. ಆದರೆ, ಜನವರಿ 1 ರಿಂದ ಶೇಕಡಾ 8 ರ ದರದಲ್ಲಿ ಬಡ್ಡಿ ಸಿಗಲಿದೆ. ಈ ಯೋಜನೆಯಲ್ಲಿ 40 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿ ಸಿಗಲಿದೆ. ಪ್ರತಿ ತ್ರೈಮಾಸಿಕದಲ್ಲಿ, ಸಣ್ಣ ಉಳಿತಾಯ ಯೋಜನೆಯಲ್ಲಿ ಪಡೆದ ಬಡ್ಡಿಯನ್ನು ಪರಿಶೀಲನೆ ನಡೆಸಲಾಗುತ್ತದೆ.

ಇನ್ನೂ, ಯಾವ ವಯಸ್ಸಿನಲ್ಲಿ ಖಾತೆಯನ್ನು ತೆರೆಯಬಹುದೆಂದರೆ,
SCSS ನಲ್ಲಿ ಖಾತೆ ತೆರೆಯಲು, 60 ವರ್ಷ ಅಥವಾ 60 ವರ್ಷಕ್ಕಿಂತ ಮೆಲ್ಪಟ್ಟ ಜನರು ಮಾತ್ರ ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದಾಗಿದೆ. ಅಲ್ಲದೆ, ವಿಆರ್ ಎಸ್ (ಸ್ವಯಂ ನಿವೃತ್ತಿ ಯೋಜನೆ) ತೆಗೆದುಕೊಂಡವರೂ ಈ ಯೋಜನೆಯಲ್ಲಿ ಖಾತೆ ತೆರೆಯಬಹುದಾಗಿದೆ.

ಈ ಯೋಜನೆಯಲ್ಲಿ ಖಾತೆ ತೆರೆಯಲು ಹೂಡಿಕೆ ಮಾಡಬೇಕಾದ ಕನಿಷ್ಠ ಮೊತ್ತ 1000 ರೂ. ಆಗಿದ್ದು, ಗರಿಷ್ಠ ಹೂಡಿಕೆ 15 ಲಕ್ಷ ರೂಪಾಯಿಗಳು ಆಗಿದೆ. ಖಾತೆ ತೆರೆಯುವ ಮೊತ್ತ ಒಂದು ಲಕ್ಷ ರೂ.ಗಿಂತ ಕಡಿಮೆಯಿದ್ದರೆ, ನೀವು ನಗದು ಪಾವತಿಸಿ ಖಾತೆಯನ್ನು ತೆರೆಯಬಹುದಾಗಿದೆ. ಆದರೆ, ಅದಕ್ಕಿಂತ ಹೆಚ್ಚಿನ ಮೊತ್ತವಿದ್ದು, ಖಾತೆಯನ್ನು ತೆರೆಯಲು, ನೀವು ಚೆಕ್ ಅನ್ನು ನೀಡಬೇಕು.

You may also like

Leave a Comment