Home » Senior producer R.V Gurupada No More!ಖ್ಯಾತ ನಿರ್ಮಾಪಕ ‘ಆರ್.ವಿ. ಗುರುಪಾದ’ ಇನ್ನಿಲ್ಲ | ಚಿತ್ರರಂಗದಲ್ಲಿ ಮುಂದುವರೆದ ದುರಂತಗಳ ಸರಣಿ!!

Senior producer R.V Gurupada No More!ಖ್ಯಾತ ನಿರ್ಮಾಪಕ ‘ಆರ್.ವಿ. ಗುರುಪಾದ’ ಇನ್ನಿಲ್ಲ | ಚಿತ್ರರಂಗದಲ್ಲಿ ಮುಂದುವರೆದ ದುರಂತಗಳ ಸರಣಿ!!

by ಹೊಸಕನ್ನಡ
0 comments

ಭಾರತೀಯ ಚಿತ್ರರಂಗದಲ್ಲಿ ದುರಂತಗಳ ಸರಣಿ ಮುಂದುವರೆದಿದ್ದು, ದುಃಖದ ವಾತಾವರಣ ನಿರ್ಮಾಣವಾಗಿದೆ. ಚಿತ್ರರಂಗದ ಸೆಲೆಬ್ರಿಟಿಗಳೆಲ್ಲ ಮೊದಲೇ ಮಾತನಾಡಿಕೊಂಡವರಂತೆ ಒಬ್ಬರ ಹಿಂದೆ ಒಬ್ಬರು ಹೊರಟು ಇಹಲೋಕ ತ್ಯಜಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಹಿರಿಯ ನಿರ್ದೇಶಕ ಸಾಗರ್ ಹಾಗೂ ಕಲಾತಪಸ್ವಿ ಕೆ.ವಿಶ್ವನಾಥ್ ನಿಧನರಾಗಿದ್ದು , ಇಂದು ಗಾಯಕಿ ವಾಣಿ ಜಯರಾಮ್ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಸಧ್ಯಕ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದ್ದು, ಹಿರಿಯ ನಿರ್ಮಾಪಕರಾದ ಆರ್.ವಿ. ಗುರುಪಾದ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕನ್ನಡ ಸೇರಿದಂತೆ ತೆಲುಗು, ತಮಿಳು ಚಿತ್ರಗಳನ್ನ ನಿರ್ಮಿಸಿ ಖ್ಯಾತಿ ಗಳಿಸಿದ್ದ ಆರ್.ವಿ. ಗುರುಪಾದ ಅವ್ರು, ಡಾ. ರಾಜ್ಕುಮಾರ್ ಸೇರಿ ತೆಲುಗಿನ ಎನ್ ಟಿಆರ್, ಕೃಷ್ಣ, ಕೃಷ್ಣಂರಾಜು, ಚಿರಂಜೀವಿ ಮುಂತಾದ ಹಿರಿಯ ನಾಯಕ ನಟರ ಜೊತೆ ಕೆಲಸ ಮಾಡಿದ್ದಾರೆ. ನಿರ್ಮಾಪಕರಾಗಿ ವಿಶೇಷ ಹೆಸರು ಮಾಡಿರುವ ಹಿರಿಯ ನಿರ್ಮಾಪಕರು, ಇಂದು ಹೃದಯಾಘಾತದಿಂದ ನಿಧನರಾಗಿದ್ದು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಸಧ್ಯ ಅವ್ರ ಸಾವು ಉದ್ಯಮವನ್ನ ತೀವ್ರ ದುಃಖದಲ್ಲಿ ಮುಳುಗಿಸಿದೆ. ಅದ್ರಂತೆ, ಈ ನಿರ್ಮಾಪಕರು ಕನ್ನಡ ಸೇರಿ ತೆಲುಗು, ತಮಿಳು, ಹಿಂದಿ ಮತ್ತು ಭಾಷೆಗಳಲ್ಲಿ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಬಾಲಿವುಡ್’ನಲ್ಲಿ ಶ್ರೀದೇವಿ ನಾಯಕಿಯಾಗಿ ನಟಿಸಿದ್ದ ‘ಅಕಲ್ ಮಂದ್’ ಚಿತ್ರಕ್ಕೆ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. ಹಲವು ತಮಿಳು ಮತ್ತು ಮಲಯಾಳಂ ಚಿತ್ರಗಳು ತೆಲುಗಿಗೆ ಡಬ್ ಆಗಿವೆ. ನಿರ್ಮಾಪಕರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

You may also like

Leave a Comment