Cancer: ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳಿಗೆ ಪ್ರತ್ಯೇಕ ಶಾಲೆ ಆರಂಭಿಸುತ್ತಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಬಳಿ ಶಾಲೆ ಪ್ರಾರಂಭಿಸಬೇಕು ಎಂದುಕೊಂಡಿದ್ದು, ಇಲ್ಲಿ ಚಿಕಿತ್ಸೆಯ ಜತೆ ಶಿಕ್ಷಣವನ್ನೂ ನೀಡಲಾಗುತ್ತದೆ ಎಂದಿದ್ದಾರೆ. ಸದ್ಯ ರಾಜ್ಯದಲ್ಲಿ 3,500 ಮಕ್ಕಳಿಗೆ ಕ್ಯಾನ್ಸರ್ ಇರಬಹುದೆಂದು ಅಂದಾಜಿಸಲಾಗಿದ್ದು, ನಮಗೆ 1,500 ಮಕ್ಕಳು ಸಿಗಬಹುದು ಎಂಬ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.
“ಇನ್ಫೋಸಿಸ್ನವರು ಶಿವಮೊಗ್ಗ ಗ್ರಾಮಾಂತರ ಭಾಗಕ್ಕೆ 200 ಕೋಟಿ ರೂ. ನೀಡಲಿದ್ದಾರೆ. ರಾಜ್ಯದಲ್ಲಿ ಶಾಲೆ ಹಾಗೂ ಪಿಯು ಕಾಲೇಜುಗಳನ್ನು ಹೆಚ್ಚೆಚ್ಚು ಪ್ರಾರಂಭಿಸಲಾಗುವುದು. ಇದರಿಂದ ಮುಂದೆ ಸರ್ಕಾರಿ ಶಾಲೆಗಳಿಗೆ ಪ್ರವೇಶ ಹೆಚ್ಚಾಗುತ್ತದೆ. ರಾಜ್ಯದ ಇತಿಹಾಸದಲ್ಲಿ ಎಜುಕೇಷನ್ ಕಮಿಟಿ ಮಾಡಲಾಗುತ್ತಿದೆ. ಇದರ ಮೂಲಕ ಶಾಲೆಯಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಇಲ್ಲಿ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ. ಸದಸ್ಯರಿಗೆ ಕೆಲಸವೇನು ಎಂಬುದನ್ನು ತಿಳಿಸಿಕೊಡಲಾಗುತ್ತದೆ” ಎಂದರು.
SSLC ಮರುಪರೀಕ್ಷೆಯಿಂದ ಹೆಚ್ಚು ವಿದ್ಯಾರ್ಥಿಗಳು ಪಾಸ್:”ಶಿಕ್ಷಣದಿಂದ ದೇಶದ ಪ್ರಗತಿ ಸಾಧ್ಯ. ಪರೀಕ್ಷೆಯಲ್ಲಿ ವೆಬ್ ಕಾಸ್ಟಿಂಗ್ ಮಾಡಿದಾಗ ಸಾಕಷ್ಟು ಟೀಕಾ ಟಿಪ್ಪಣಿ ಬಂದವು. ಎಸ್ಎಸ್ಎಲ್ಸಿ ಮರು ಪರೀಕ್ಷೆ ನಡೆಸಿದಾಗ ಫಲಿತಾಂಶ ಚೆನ್ನಾಗಿಯೇ ಬಂದಿದೆ. ಮರು ಪರೀಕ್ಷೆಗೆ ಪರೀಕ್ಷಾ ಶುಲ್ಕ ತೆಗೆದುಕೊಂಡಿಲ್ಲ. ಕಳೆದ ಬಾರಿ 36 ಸಾವಿರ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 2.76 ಲಕ್ಷ ವಿದ್ಯಾರ್ಥಿಗಳು ಪಾಸಾಗಿರಲಿಲ್ಲ. ಈಗ 51 ವಿದ್ಯಾರ್ಥಿಗಳು 625ಕ್ಕೆ 625ಕ್ಕೆ ಅಂಕ ಗಳಿಸಿದ್ದಾರೆ” ಎಂದು ಮಾಹಿತಿ ನೀಡಿದರು.
“ನನಗೆ ಟೀಕೆ ಮಾಡಿದವರಿಗೆ ಮಕ್ಕಳು ಈಗ ಉತ್ತರ ನೀಡಿದ್ದಾರೆ. ನನ್ನ ಹೇರ್ ಸ್ಟೈಲ್ ಬಗ್ಗೆ, ನನ್ನ ಕೆಲಸದ ಬಗ್ಗೆ ಮಾತನಾಡುವವರಿಗೆ ಫಲಿತಾಂಶದ ಮೂಲಕ ಮಕ್ಕಳು ಉತ್ತರಿಸಿದ್ದಾರೆ. ಈಗ 84 ಸಾವಿರ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ.36 ಸರ್ಕಾರಿ ಶಾಲೆ ಮಕ್ಕಳು ಎರಡನೇ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಈಗ ಸರ್ಕಾರಿ ಶಾಲೆಯಲ್ಲಿ ಪ್ರಗತಿ ಕಾಣುತ್ತಿದೆ. ಮಕ್ಕಳಿಗೆ ಇನ್ನೂ ಮೂರನೇ ಪರೀಕ್ಷೆಯ ಅವಕಾಶ ಇದೆ. ಇದನ್ನು ಬಳಸಿಕೊಳ್ಳಬೇಕು. ನಾನು ಅಧಿಕಾರ ಸ್ವೀಕರಿಸಿ ಎರಡು ವರ್ಷ ಆಗಿದೆ. ಇದರಿಂದ ಬೆಂಗಳೂರಿನಲ್ಲಿ ‘ಎರಡು ವರ್ಷ ಹರುಷ’ ಎಂಬ ಕಾರ್ಯಕ್ರಮ ನಡೆಸಲಾಗಿದೆ” ಎಂದರು.
ಇದನ್ನೂ ಓದಿ : ಮಹಾಭಾರತದ ಆಸಕ್ತಿಕರ ಕಥೆ: ಮೀನುಗಾರನ ಮಗಳಿಗೆ ಕಣ್ಣು ಹಾಕಿದ್ದ ಕುರು ಸಾಮ್ರಾಜ್ಯದ ಅಧಿಪತಿ!
