Home » September Holidays: ಸೆಪ್ಟೆಂಬರ್​​ನಲ್ಲಿ ವಿದ್ಯಾರ್ಥಿಗಳಿಗೆ ಸೇರಿ, ಉದ್ಯೋಗಿಗಳಿಗೂ ಭರ್ಜರಿ ರಜೆಯ ಮೋಜು! ಇಲ್ಲಿದೆ ರಜೆಯ ಲಿಸ್ಟ್

September Holidays: ಸೆಪ್ಟೆಂಬರ್​​ನಲ್ಲಿ ವಿದ್ಯಾರ್ಥಿಗಳಿಗೆ ಸೇರಿ, ಉದ್ಯೋಗಿಗಳಿಗೂ ಭರ್ಜರಿ ರಜೆಯ ಮೋಜು! ಇಲ್ಲಿದೆ ರಜೆಯ ಲಿಸ್ಟ್

5 comments
September Holidays

September Holidays: ಸೆಪ್ಟೆಂಬರ್ ತಿಂಗಳಲ್ಲಿ ಸಾಲು ಸಾಲು ರಜಾದಿನಗಳಿವೆ (September Holidays). ಈ ರಜೆಗಳು ಶಿಕ್ಷಣ ಸಂಸ್ಥೆಗಳು ಮತ್ತು ಕಚೇರಿಗಳಿಗೆ ಅನ್ವಯ ಆಗಲಿದೆ. ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ಓದಿ.

ಹೌದು,ಬರುವ ತಿಂಗಳಲ್ಲಿ, ಶಾಲೆಗಳಿಗೆ ಯಾವ ದಿನಗಳಲ್ಲಿ ರಜೆ ಇದೆ, ಕಚೇರಿಗೆ ಯಾವಾಗ ರಜೆ ಎಂದು ಕುತೂಹಲದಿಂದ ಕಾಯುತ್ತಿರುವವರಿಗೆ ಇಲ್ಲಿದೆ ಸಿಹಿ ಸುದ್ದಿ. ಇನ್ನೆರಡು ದಿವಸದಲ್ಲಿ ಸೆಪ್ಟೆಂಬರ್ ತಿಂಗಳು ಆರಂಭವಾಗಲಿದ್ದು, ಈ ತಿಂಗಳನಲ್ಲಿ ಸತತ ಐದು ದಿನ ರಜೆಗಳು ಇರಲಿದೆ . ಸೆಪ್ಟೆಂಬರ್ 7 ಮತ್ತು 16 ರಂದು ಸಾರ್ವಜನಿಕ ರಜೆ ಎಂದು ಸರ್ಕಾರ ಘೋಷಿಸಿದೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು ಆ ಎರಡು ದಿನಗಳಲ್ಲಿ ಮುಚ್ಚಲ್ಪಡುತ್ತವೆ.

ಸೆಪ್ಟೆಂಬರ್ 7ರಂದು ವಿನಾಯಕ ಚತುರ್ಥಿ ಹಬ್ಬ ಇದೆ. ಈ 7ನೇ ತಾರೀಖು ಶನಿವಾರ ಬಂದಿದ್ದು, ಇದಾದ ನಂತರ ಭಾನುವಾರ ಸೇರಿ ಸತತ ಎರಡು ದಿನ ರಜೆ ಸಿಗಲಿದೆ.

ಇನ್ನು ಸರ್ಕಾರ ಸೆಪ್ಟಂಬರ್ ತಿಂಗಳಲ್ಲಿ ಮತ್ತೊಮ್ಮೆ ಸಾರ್ವಜನಿಕ ರಜೆ ನೀಡಿದೆ. ಮಿಲಾದ್-ಉನ್-ನಬಿ ಅಥವಾ ಈದ್-ಎ-ಮಿಲಾದ್ ಅನ್ನು ಸೆಪ್ಟೆಂಬರ್ 16 ರಂದು ಆಚರಿಸಲಾಗುತ್ತದೆ. ಈ ಹಬ್ಬವು ಸೋಮವಾರ ಬರುತ್ತದೆ. ಅದರ ಹಿಂದಿನ ದಿನ ಸೆಪ್ಟಂಬರ್ 15ರ ಭಾನುವಾರ ರಜೆ ಇರಲಿದೆ. ಅದೇ ರೀತಿ ಸೆ.14ರಂದು ಎರಡನೇ ಶನಿವಾರ ಬಂದಿದ್ದು, ಹೀಗಾಗಿ ಸೆ.14ರಿಂದ 16ರವರೆಗೆ ಸತತ ಮೂರು ದಿನ ರಜೆ ಸಿಗಲಿದೆ.

ಸೆಪ್ಟೆಂಬರ್ 16 ರಂದು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ರಜೆ ಇರುತ್ತೆ. ಇನ್ನು ಸೆಪ್ಟೆಂಬರ್ ತಿಂಗಳಲ್ಲಿ 14 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆದ್ರೆ ವಿವಿಧ ಹಬ್ಬಗಳು ಮತ್ತು ಇತರ ಕಾರ್ಯಕ್ರಮಗಳ ಕಾರಣ ಆಯಾ ಪ್ರದೇಶಗಳಲ್ಲಿ ಬ್ಯಾಂಕ್ ರಜೆಗಳು ಲಭ್ಯವಾಗಲಿದೆ.

You may also like

Leave a Comment