Heart Attack: ಹಾಸನ ಹೃದಯಾಘಾತ ಪ್ರಕರಣ ತನಿಖೆ ಚುರುಕುಗೊಂಡಿದ್ದು, ಇಂದು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ರವೀಂದ್ರನಾಥ್ ರಿಪೋರ್ಟ್ ಸಲ್ಲಿಸಲಿದ್ದಾರೆ. ಸುಮಾರು 50 ಪ್ರಶ್ನೆಗಳನ್ನ ಮುಂದಿಟ್ಟುಕೊಂಡು ತಙ್ಞರ ತಂಡ ಹಾಸನ ಹೃದಯಾಘಾತ ಪ್ರಕರಣ ತನಿಖೆ ಮಾಡಲಾಗಿದೆ. ಹಾಸನ ಹೃದಯಾಘಾತ ಪ್ರಕರಣಗಳನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಸೂಕ್ತ ಕಾರಣ ಪತ್ತೆಹಚ್ಚುವುದಕ್ಕೆ ತಙ್ಞರರಿಂದ ಕೂಲಂಕುಂಶವಾಗಿ ಅಧ್ಯಯನ ಮಾಡಲು ಆದೇಶ ನೀಡಿತ್ತು.
ಹಾನಸದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದ 23 ಮಂದಿಯ ಕುರಿತು ತನಿಖೆ ಮಾಡಲಾಗಿತ್ತು. ಡಿಹೆಚ್ ಓಗಳಿಗೆ ಕೂಲಂಕುಶವಾಗಿ ಅಧ್ಯಯನ ಮಾಡಲು ಸೂಚನೆ ನೀಡಲಾಗಿತ್ತು.
50 ಪ್ರಶ್ನೆಗಳು ಯಾವ ರೀತಿ ಪ್ರಶ್ನೆಗಳನ್ನ ಇಟ್ಟಿಕೊಂಡು ತನಿಖೆ ?
೧. ಮೊದಲೇ ಅನಾರೋಗ್ಯ ಇತ್ತ ?
೨. ಬೇರೆ ಖಾಯಿಲೆ ಇದ್ದು ಔಷದಿ ಪಡೆಯುತ್ತಿದ್ರ ?
೩. ಕುಟುಂಬದಲ್ಲಿ ಯಾರಿಗಾದ್ರು ಅನಾರೋಗ್ಯ ಇತ್ತ ? ಯಾರಿಗಾದ್ರು ಹೃದಯಾಘಾತ ಆಗಿತ್ತ ?
೫. ಮೊದಲೆಲ್ಲ ಎದೆನೋವು ಇದೆ ಅಂತಾ ಕುಟುಂಬಸ್ಥರಿಗೆ ಹೇಳಿದ್ರಾ ? ಯಾವುದೇ ಅನಾರೋಗ್ಯ ಸಮಸ್ಯೆ ಇಲ್ಲದೇ ಕಾಣಿಸಿಕೊಂಡಿದ್ದ
೬. ಮರಣೋತ್ತರ ಪರೀಕ್ಷೆ ಮಾಡಿದ್ದರೆ ರಿಪೋರ್ಟ್ ಸಲ್ಲಿಸಿ ?
೭. ಆಸ್ಫತ್ರಗೆ ಹೋದ ಮೇಲೆ ಸಾವು ಆಗಿದ್ದ ! ದಾರಿ ಮಧ್ಯೆದಲ್ಲೆ ಸಾವು ಆಗಿರೋದ ?
೮. ಆಸ್ಫತ್ರೆ ಹಿಸ್ಟರಿ, ಮೆಡಿಕಲ್ ಹಿಸ್ಟರಿ ಸಲ್ಲಿಸಿ ?
ಈ ರೀತಿ ಪ್ರಶ್ನೆಗಳನ್ನ ಮುಂದಿಟ್ಟುಕೊಂಡು ತನಿಖೆ ಮಾಡಿರೋ ತಙ್ಞರ ತಂಡ, ಇಂದು ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ನಂತರ ಸರ್ಕಾರ ಈ ಬಗ್ಗೆ ಯಾವ ಕ್ರಮಕ್ಕೆ ಮುಂದಾಗುತ್ತದೆ ಅನ್ನೋದನ್ನು ಕಾದುನೋಡಬೇಕು.
ಇದನ್ನೂ ಓದಿ: Telangana: ‘ನನ್ನ ಕೋಳಿಗೆ ನ್ಯಾಯ ಕೊಡಿಸಿ ಸರ್’ – ಕೋಳಿ ಹಿಡಿದು ಪೊಲೀಸ್ ಠಾಣೆಗೆ ಬಂದ ಅಜ್ಜಿ
