Home » Tirupati: ಪಹಲ್ಗಾಮ್‌ ದಾಳಿ ನಂತರ ತಿರುಪತಿ ದೇವಸ್ಥಾನದ ಸುತ್ತ ಗಂಭೀರ ಭದ್ರತಾ ಕ್ರಮ!

Tirupati: ಪಹಲ್ಗಾಮ್‌ ದಾಳಿ ನಂತರ ತಿರುಪತಿ ದೇವಸ್ಥಾನದ ಸುತ್ತ ಗಂಭೀರ ಭದ್ರತಾ ಕ್ರಮ!

0 comments
Tirupati

Tirupati: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಪರಿಣಾಮವಾಗಿ ತಿರುಮಲದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಗಟ್ಟಿಗೊಳಿಸಲಾಗಿದೆ. ಈ ಕ್ರಮವನ್ನು ಕೇಂದ್ರ ಗುಪ್ತಚರ ಇಲಾಖೆಯ (IB) ಎಚ್ಚರಿಕೆಯ ನಂತರ ಕೈಗೊಳ್ಳಲಾಗಿದೆ.

ಘಾಟ್ ರಸ್ತೆ ಮತ್ತು ಪ್ರವೇಶದ್ವಾರಗಳಲ್ಲಿ ಕಟ್ಟುನಿಟ್ಟಾದ ತಪಾಸಣೆ

ಅಲಿಪಿರಿ ಚೆಕ್‌ಪೋಸ್ಟ್ ಸೇರಿದಂತೆ ತಿರುಮಲ ಘಾಟ್ ರಸ್ತೆಯ ಪ್ರಮುಖ ಪ್ರವೇಶ ಮಾರ್ಗಗಳಲ್ಲಿ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ವಾಹನಗಳು ಮತ್ತು ಭಕ್ತರ ಸಾಮಾನುಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರತಿಯೊಬ್ಬ ಭಕ್ತನೂ ಶೋಧನೆಗೆ ಒಳಪಟ್ಟ ನಂತರವೇ ತಿರುಪತಿ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ.

ತಿರುಮಲ ತಿರುಪತಿ ದೇವಸ್ಥಾನಂ (TTD)ನ ವಿಜಿಲೆನ್ಸ್ ತಂಡವು ದೇವಸ್ಥಾನ ಪ್ರಾಂಗಣ ಮತ್ತು ಘಾಟ್ ರಸ್ತೆಗಳಲ್ಲಿ ಸತತ ಗಸ್ತು ತಿರುಗುತ್ತಿದೆ. ಅನುಮಾನಾಸ್ಪದ ವಸ್ತುಗಳು ಅಥವಾ ವರ್ತನೆ ಕಂಡುಬಂದಲ್ಲಿ, ಸಂಬಂಧಿತ ವ್ಯಕ್ತಿಗಳನ್ನು ತಡೆಹಿಡಿದು ವಿಚಾರಣೆ ನಡೆಸಲಾಗುತ್ತದೆ.

ಶ್ರೀವಾರಿ ದೇವಸ್ಥಾನದ ಸುತ್ತಮುತ್ತಲೂ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಸಿಬಿಐಸ್ ಸಿಬ್ಬಂದಿ ನಿಯೋಜಿಸಲ್ಪಟ್ಟಿದ್ದಾರೆ. ಸಿಬ್ಬಂದಿಗಳು 24 ಗಂಟೆಗಳ ಗಸ್ತು ಪ್ಯಾಟ್ರೋಲಿಂಗ್ ಮಾಡುತ್ತಿದ್ದು, ಯಾವುದೇ ಅನಾಹುತ ತಡೆಗಟ್ಟಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ.

You may also like