Home » Terror Attack : ಪಹಲ್ಗಾಮ್‌ ದಾಳಿಯಿಂದ ತೀವ್ರ ನೋವು – ಇಸ್ಲಾಂ ಧರ್ಮವನ್ನೇ ತ್ಯಜಿಸಿದ ಶಿಕ್ಷಕ!

Terror Attack : ಪಹಲ್ಗಾಮ್‌ ದಾಳಿಯಿಂದ ತೀವ್ರ ನೋವು – ಇಸ್ಲಾಂ ಧರ್ಮವನ್ನೇ ತ್ಯಜಿಸಿದ ಶಿಕ್ಷಕ!

0 comments

Terror Attack : ಕಳೆದ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿಯಿಂದಾಗಿ ಮನನೊಂದ ಮುಸ್ಲಿಂ ಶಿಕ್ಷಕರು, ತಮ್ಮ ಧರ್ಮವನ್ನೇ ತ್ಯಜಿಸುವುದಾಗಿ ಘೋಷಿಸಿದ್ದಾರೆ.

ಹೌದು, ಉಗ್ರರ ಕೃತ್ಯದಿಂದ ನೊಂದ ಪಶ್ಚಿಮ ಬಂಗಾಳದ ದಕ್ಷಿಣ 24 ಪಗರಣ ಜಿಲ್ಲೆಯ ಬದುರಿಯಾದ ನಿರ್ಮಾಣ್‌ ಆದರ್ಶ್‌ ವಿದ್ಯಾಪೀಠದಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಸಬೀರ್‌ ತಾವು ಮನುಷ್ಯನಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ ಎಂದು ಇಸ್ಲಾಂ ಧರ್ಮವನ್ನು ತ್ಯಜಿಸುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ಧರ್ಮದ ಹೆಸರಿನಲ್ಲಿ ಹಿಂಸಾಚಾರ ಘಟನೆಗಳು ಸಂಭವಿಸುತ್ತಿರುವುದು ನನಗೆ ತುಂಬಾ ನೋವು ತಂದಿದೆ. ಹಿಂಸೆಯನ್ನು ಹರಡಲು ಧರ್ಮವನ್ನು ಪದೇ ಪದೇ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇದು ಸರಿಯಲ್ಲ. ನಾನು ಯಾವುದೇ ಧರ್ಮವನ್ನು ಅಗೌರವಿಸುತ್ತಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ ಎಂದಿದ್ದಾರೆ. ಅಲ್ಲದೆ ನಾನು ಯಾವುದೇ ಧಾರ್ಮಿಕ ಗುರುತಿನ ಕಾರಣದಿಂದ ಅಲ್ಲ, ಮನುಷ್ಯನಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ. ಅದಕ್ಕಾಗಿಯೇ ನಾನು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ.

You may also like