Home » ಶಬರಿಮಲೆಗೆ ಹೋಗಲು ಯುವತಿಯರ ಯತ್ನ : ಕೆಎಸ್​ಆರ್​ಟಿಸಿ ಬಸ್​ ತಡೆದು ಭಕ್ತರ ತರಾಟೆ

ಶಬರಿಮಲೆಗೆ ಹೋಗಲು ಯುವತಿಯರ ಯತ್ನ : ಕೆಎಸ್​ಆರ್​ಟಿಸಿ ಬಸ್​ ತಡೆದು ಭಕ್ತರ ತರಾಟೆ

by Praveen Chennavara
0 comments

ಕಾಸರಗೋಡು: ಶಬರಿಮಲೆಗೆ ಹೋಗಲು ಯತ್ನಿಸಿದ ಇಬ್ಬರು ಯುವತಿಯರನ್ನು ಮಾರ್ಗದಲ್ಲೇ ಭಕ್ತರು ತಡೆದು ವಾಪಸ್​ ಕಳುಹಿಸಿದ ಘಟನೆ ಸೋಮವಾರ ಮಧ್ಯರಾತ್ರಿ ಸಂಭವಿಸಿದೆ.

ಕೇರಳದ ಶಬರಿಮಲೆಗೆ ಪಾರಂಪರಿಕ ಧಾರ್ಮಿಕ ವಿಧಿವಿಧಾನಗಳನ್ನು ಉಲ್ಲಂಘಿಸಿ ಸ್ತ್ರೀಯರು ಮತ್ತೆ ಪ್ರವೇಶಿಸಲಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಭಕ್ತರು ಸೋಮವಾರ ಮಧ್ಯರಾತ್ರಿ ಚೆಂಗನ್ನೂರಿನಲ್ಲಿ ಕೆಎಸ್​ಆರ್​ಟಿಸಿ ಬಸ್​ ತಡೆದು ಪರಿಶೀಲಿಸಿದರು. ಬಸ್​ನಲ್ಲಿದ್ದ ಇಬ್ಬರು ಯುವತಿಯರನ್ನು ಹಿಂದಕ್ಕೆ ಕಳುಹಿಸಿದರು.

ಶಬರಿಮಲೆ ಕ್ಷೇತ್ರಕ್ಕೆ ಯುವತಿಯರು ವಿಧಿವಿಧಾನ ಉಲ್ಲಂಘಿಸಿ ಬರುವ ಸುಳಿವು ಲಭಿಸಿದ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಹಾಗೂ ಅಯ್ಯಪ್ಪ ವ್ರತಧಾರಿಗಳು ಎಚ್ಚರಿಕೆಯಿಂದ ಇದ್ದಾರೆ. ಉಪವಾಸ ವ್ರತದೊಂದಿಗೆ ದರ್ಶನಕ್ಕೆ ಬರುವ ಇತರ ಅಯ್ಯಪ್ಪ ಭಕ್ತರಿಗೆ ಸಮಸ್ಯೆಯಾಗುವ ಯಾವುದೇ ಬೆಳವಣಿಗೆಗೆ ಅವಕಾಶ ಕೊಡುವುದಿಲ್ಲ ಎಂದು ಹಿಂದು ಸಂಘಟನೆ ಪ್ರಮುಖರು ತಿಳಿಸಿದ್ದಾರೆ.

You may also like

Leave a Comment