Home » Shakti Yojana: ಗಂಡನನ್ನು ಬಿಟ್ಟು ತಿರುಗೋಕೆ ಬೇಜಾರು, ಅವರಿಗೂ ಫ್ರೀ ಟಿಕೆಟ್ ಕೊಡಿ – ಮಹಿಳೆ ಆಗ್ರಹ

Shakti Yojana: ಗಂಡನನ್ನು ಬಿಟ್ಟು ತಿರುಗೋಕೆ ಬೇಜಾರು, ಅವರಿಗೂ ಫ್ರೀ ಟಿಕೆಟ್ ಕೊಡಿ – ಮಹಿಳೆ ಆಗ್ರಹ

0 comments

Shakti Yojana: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯ ಮುಖಾಂತರ ಇದೀಗ 500 ಕೋಟಿ ಮಹಿಳೆಯರು ಫ್ರೀ ಬಸ್ ಪ್ರಯಾಣ ಮಾಡಿದ್ದಾರೆ ಎಂಬ ಸಂತಸದ ಸುದ್ದಿಯನ್ನು ರಾಜ್ಯ ಸರ್ಕಾರ ಹಂಚಿಕೊಂಡಿದೆ. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು ಇದರಲ್ಲಿ ಮಹಿಳೆಯೊಬ್ಬರು ನನ್ನ ಗಂಡನನ್ನು ಬಿಟ್ಟು ಓಡಾಡಲು ನನಗೆ ಬೇಸರ ಹೀಗಾಗಿ ಗಂಡಸರಿಗೂ ಕೂಡ ಫ್ರೀ ಟಿಕೇಟ್ ಯೋಜನೆಯನ್ನು ಜಾರಿಗೊಳಿಸಿ ಇಂದು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ಮಹಿಳೆ ಹೆಂಗಸರಿಗೆ ಉಚಿತ ಟಿಕೆಟ್ ನೀಡಿ ಗಂಡಸರಿಗೆ ಬಿಟ್ಟುಬಿಟ್ಟರು. ಗಂಡನನ್ನು ಬಿಟ್ಟು ತಿರುಗಲು ನನಗೆ ತುಂಬಾ ಬೇಸರ. ಹೀಗಾಗಿ ಗಂಡಸರಿಗೂ ಫ್ರೀ ಟಿಕೆಟ್ ಕೊಡಿ. ನಮ್ಮ ಹೆಂಗಸರು ಲಿಪ್ಸ್ಟಿಕ್ ಬಳಿದುಕೊಂಡು ಬ್ಯಾಗ್ ಹಾಕಿಕೊಂಡು ಸುತ್ತಲೂ ಹೋಗುತ್ತಾರೆ. ಪಾಪ ನಮ್ಮ ಗಂಡಸರ ಗತಿ ಏನು. ಬರೀ ಹೆಂಗಸರಿಗೆ ಫ್ರೀ ಟಿಕೆಟ್ ಕೊಟ್ಟು ಸಿದ್ದರಾಮಯ್ಯ ಸಾಹೇಬರು ತಪ್ಪು ಮಾಡಿದರು ಇಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ನಾನು ಸಿದ್ದರಾಮಯ್ಯ ಸಾಹೇಬ್ರ ಬಳಿ ಮಾತನಾಡಬೇಕಿತ್ತು, ಈ ಕುರಿತು ಚರ್ಚಿಸಬೇಕಿತ್ತು, ಆದರೆ ಪೊಲೀಸರು ಯಾರು ನನ್ನನ್ನು ಅವರ ಬಳಿ ಬಿಡಲಿಲ್ಲ ಬಾಗಿಲಲ್ಲಿ ತಡೆದರು ಎಂದು ಕೂಡ ವಿಡಿಯೋದಲ್ಲಿ ಹೇಳಿದ್ದಾರೆ.

 

View this post on Instagram

 

A post shared by Indiantv Mysore (@indiantv_karnataka)

You may also like