Home » ಸ್ನಾನಕ್ಕೆ ಅಂತ ಹೋದವಳು 4 ದಿನ ಆದ್ರೂ ಹೊರಗೆ ಬರಲೇ ಇಲ್ಲ!

ಸ್ನಾನಕ್ಕೆ ಅಂತ ಹೋದವಳು 4 ದಿನ ಆದ್ರೂ ಹೊರಗೆ ಬರಲೇ ಇಲ್ಲ!

0 comments

ಸಮಾಜದಲ್ಲಿ ಯಾವುದೆಲ್ಲ ರೀತಿಯ ಘಟನೆಗಳು ನಡೆಯುತ್ತಾ ಇರುತ್ತವೆ ಅಂತ ಊಹಿಸಲು ಅಸಾಧ್ಯ. ಚಿತ್ರ ವಿಚಿತ್ರದ ಲೋಕವಿದು. ಇದೀಗ ಇಲ್ಲೊಂದು ಭಯಾನಕವಾದ ಘಟನೆ ನಡೆದಿದೆ. ಇದನ್ನು ಕೇಳ್ತಾ ಇದ್ರೆ ಸ್ನಾನಕ್ಕೆ ಹೋಗೋದೇ ಬೇಡ ಅಂತ ಅನಿಸುತ್ತೆ.

ಎಸ್, ಚೀನಾದ ಹುಡುಗಿ. ಸಿಂಗಾಪುರ್ ನಲ್ಲಿ ವಾಸವಾಗಿದ್ದಳು. ಅವಳಿಗೆ ನಡೆದ ಘಟನೆಯನ್ನು ಕೇಳ್ತಾ ಇದ್ರೆ ಒಂದು ಬಾರಿ ಶಾಕ್ ಆಗೋದು ಪಕ್ಕಾ!

ಏನಿದು ಘಟನೆ?
ಆಕೆ ಸ್ನಾನಕ್ಕೆ ಎಂದು ಬಾತ್ ರೂಂ ಗೆ ಹೋಗುತ್ತಾಳೆ. ಬಾಗಿಲನ್ನು ಜೋರಾಗಿ ಹಾಕಿಕೊಳ್ಳುತ್ತಾಳೆ. ಅವಳ ಕೈ ಗೆ ಬಾಗಿಲನ್ನು ಹಿಡಿಯುವ ಕೈ ಹಿಡಿ, door locker ಬರುತ್ತೆ. ಜೊತೆಗೆ ಬಾಗಿಲು ಕೂಡ ಲಾಕ್ ಆಗುತ್ತೆ.

ಆಕೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಬಾಗಿಲು ತೆಗೆಯೋಕೆ ಆಗೋಲ್ಲ. ಬಾಗಿಲು ಲಾಕ್ ಆಗಿದೆ. ಮೊಬೈಲ್ ಕೂಡ ಹೊರಗಿದೆ. ಜೋರಾಗಿ ಬೊಬ್ಬೆ ಹೊಡೆಯುತ್ತಲೇ, ಬಾತ್ ರೂಮ್ ನಲ್ಲಿರುವ ವಸ್ತುಗಳನ್ನು ಕೆಳಗೆ ಹಾಕಿ ಜೋರಾಗಿ ಕರೆಯುತ್ತಾಳೆ. ಯಾರಿಗೂ ತಿಳಿಯುವುದಿಲ್ಲ. ಹೀಗೆ ಮಾಡ್ತಾ ಮಾಡ್ತಾ ಅವಳು ಬರೋಬರಿ 4 ದಿನಗಳ ಕಾಲ ಬಾತ್ ರೂಮ್ ನಲ್ಲೆ ಲಾಕ್ ಆಗಿದ್ದಳು.

ಆಕೆಯ ಮನೆಯವರು ಚೀನಾದಲ್ಲಿ ಇದ್ದರು. 4 ದಿನಗಳಿಂದ ಇವರು ಕಾಲ್ ಮಾಡಿದ್ರು ತೆಗಿತಾ ಇರ್ಲಿಲ್ಲ ಮತ್ತು ಈಕೆ ಕೂಡ ಕಾಲ್ ಮಾಡಲಿಲ್ಲ ಅಂತ ಗಾಬರಿ ಆಗಿ, ಸಿಂಗಾಪೂರ್ ನಲ್ಲಿ ಇರುವ ತಮ್ಮ ಸಂಬಂಧಿಕರಿಗೆ ತಿಳಿಸುತ್ತಾರೆ. ಆಗ ಅವರು ಈಕೆಯ ಮನೆಗೆ ಬರುತ್ತಾರೆ. ಬಂದಾಗ ಈಕೆಯ ಪರಿಸ್ಥಿತಿ ಎಲ್ಲಾ ತಿಳಿಯುತ್ತದೆ.

ಆಕೆಯನ್ನು ಬಾತ್ ರೂಮ್ ನಿಂದ ಹೊರಗೆ ಕರೆತರುತ್ತಾರೆ. ಇದೀಗ ಆಕೆಯು ನಿಷ್ಯಕ್ತಳಾಗಿದ್ದಾಳೆ. ಅಬ್ಬಬ್ಬಾ! ಈ ವಿಷ್ಯ ಎಷ್ಟೊಂದು ಭಯಾನಕವಾಗಿದೆ ಅಂತ ನೀವು ಅಚ್ಚರಿ ಪಡ್ತಾ ಇದ್ದೀರಾ? ಒಬ್ಬರೇ ಇದ್ದಾಗ ಹುಷಾರ್!

You may also like

Leave a Comment