Home » Shimoga: ಬಾಲಕನ ಸಮಯ ಪ್ರಜ್ಞೆ: ತಪ್ಪಿದ ಭಾರೀ ಅನಾಹುತ!

Shimoga: ಬಾಲಕನ ಸಮಯ ಪ್ರಜ್ಞೆ: ತಪ್ಪಿದ ಭಾರೀ ಅನಾಹುತ!

0 comments

Shimoga: ಶಾರ್ಟ್‌ ಸರ್ಕ್ಯೂಟ್‌ನಿಂದ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಸೋಮವಾರ ಶಿವಮೊಗ್ಗ ತಾಲೂಕಿನ ಅಯನೂರು ಪಟ್ಟಣದಲ್ಲಿ ನಡೆದಿದ್ದು, ಅದೃಷ್ಟವಶಾತ್‌ ಪತ್ರಿಕೆ ಹಂಚುವ ಬಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.

ಆಯನೂರಿನ ಬಸ್‌ ನಿಲ್ದಾಣದ ಬಳಿ ಸೋಮವಾರ ಬೆಳಗ್ಗೆ ಶಾರ್ಟ್‌ ಸರ್ಕ್ಯೂಟ್‌ನಿಂದ ಕಟ್ಟಡದಲ್ಲಿ ಬೆಂಕಿ ಹತ್ತಿಕೊಂಡಿದೆ. ಬೆಳಗ್ಗೆ 6ಕ್ಕೆ ಪತ್ರಿಕೆ ಹಂಚುವ ಬಾಲಕ ಶ್ರೇಯಸ್‌ ಮಿರಜ್ಕರ್‌ ಕಟ್ಟಡಕ್ಕೆ ಬೆಂಕಿ ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಬಂದಿದ್ದು, ಫೈಯರ್‌ಸ್ಪ್ರೇ ಮಾಡಿ ಬೆಂಕಿ ನಂದಿಸಿದ್ದಾರೆ.

ಇದೇ ಕಟ್ಟಡಕ್ಕೆ ಹೊಂದಿಕೊಂಡಂತೆ ಖಾಸಗಿ ಬ್ಯಾಂಕ್‌ ಹಾಗೂ ಎಟಿಎಂ ಇದ್ದು, ಅದೃಷ್ಟವಶಾತ್‌ ಹಾನಿ ಸಂಭವಿಸಿಲ್ಲ.

You may also like