Home » Shivamogga: ಅಬ್ಬಿಫಾಲ್ಸ್‌ ನೀರಿನಲ್ಲಿ ಕೊಚ್ಚಿ ಹೋದ ಬೆಂಗಳೂರಿನ ಯುವಕ: ವಿಡಿಯೋ ವೈರಲ್

Shivamogga: ಅಬ್ಬಿಫಾಲ್ಸ್‌ ನೀರಿನಲ್ಲಿ ಕೊಚ್ಚಿ ಹೋದ ಬೆಂಗಳೂರಿನ ಯುವಕ: ವಿಡಿಯೋ ವೈರಲ್

0 comments

Shivamogga: ಹೊಸನಗರ ತಾಲೂಕಿನ ಅಬ್ಬಿ ಫಾಲ್ಸ್‌ನಲ್ಲಿ ಫೋಟೋ ತೆಗೆಸಿಕೊಳ್ಳಲು ಹೋಗಿ ಬೆಂಗಳೂರು ಮೂಲದ ಪ್ರವಾಸಿಗನೊಬ್ಬ ನೀರು ಪಾಲಾಗಿರುವ ಘಟನೆ ನಡೆದಿದೆ.

ಮೃತನನ್ನು ಬೆಂಗಳೂರಿನ ನಾಗರಬಾವಿಯ ಖಾಸಗಿ ಕಂಪನಿಯೊಂದರ ಮ್ಯಾನೇಜರ್‌ ರಮೇಶ್‌ (35) ಎಂದು ಗುರುತಿಸಲಾಗಿದೆ. ತನ್ನ ಐವರು ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಬಂದಿದ್ದು, ಫೋಟೋಗೆ ಫೋಸ್‌ ನೀಡಲೆಂದು ಫಾಲ್ಸ್‌ಗೆ ಇಳಿದಿದ್ದು, ಈ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಫಾಲ್ಸ್‌ನಲ್ಲಿ ರಮೇಶ್‌ ಕಣ್ಮರೆಯಾಗುವ 20 ಸೆಕೆಂಡ್‌ ವಿಡಿಯೋ ವೈರಲ್‌ ಆಗಿದೆ. ಬಂಡೆ ಮೇಲೆ ಕುಳಿತ ರಮೇಶ್‌ ಮೊದಲಿಗೆ ತನ್ನ ಎರಡು ಕೈಗಳನ್ನು ಮೇಲೆತ್ತಿ ಸಂಭ್ರಮ ಪಡುತ್ತಾ, ಬಂಡೆಯಿಂದ ಕೆಳಗಿಳಿಯುತ್ತಾರೆ. ಈ ಸಮಯದಲ್ಲಿ ನೀರಿನ ರಭಸಕ್ಕೆ ರಮೇಶ್‌ ಕೊಚ್ಚಿ ಹೋಗಿದ್ದು, ಕೊಚ್ಚಿ ಹೋಗುವ ಸಂದರ್ಭದಲ್ಲಿ ಸ್ನೇಹಿತರು ಬೊಬ್ಬೆ ಹಾಕುವ ವಿಡಿಯೋ ವೈರಲ್‌ ಆಗಿದೆ.

ಫಾಲ್ಸ್‌ನ ಕೆಳಭಾಗದಲ್ಲಿ ರಮೇಶ್‌ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like