Home » Shivamogga: ಆಗುಂಬೆ ಘಾಟ್ ತಿರುವಿನಲ್ಲಿ ಶಾಲಾ ಮಕ್ಕಳಿದ್ದ ಬಸ್ ಡಿಕ್ಕಿ!! ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ!!

Shivamogga: ಆಗುಂಬೆ ಘಾಟ್ ತಿರುವಿನಲ್ಲಿ ಶಾಲಾ ಮಕ್ಕಳಿದ್ದ ಬಸ್ ಡಿಕ್ಕಿ!! ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ!!

0 comments
Shivamogga

ಶಿವಮೊಗ್ಗ:ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್ ತಿರುವಿನಲ್ಲಿ ಶಾಲಾ ಮಕ್ಕಳಿದ್ದ ಬಸ್ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಪ್ರಪಾತಕ್ಕೆ ಊರುಳಲಿದ್ದ ಬಸ್ ಮುಂದಕ್ಕೆ ಚಲಿಸಿ ನಿಂತ ಪರಿಣಾಮ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸದ ಬಗ್ಗೆ ವರದಿಯಾಗಿದೆ.

ಬೆಂಗಳೂರಿನ ಶಾಲೆಯೊಂದರ ವಿದ್ಯಾರ್ಥಿಗಳನ್ನು ಹೊತ್ತ ಬಸ್ ಶೃಂಗೇರಿಯಿಂದ ಕೊಲ್ಲೂರು ಹೋಗಲು ಆಗುಂಬೆ ಘಾಟ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಾಟ್ ನ ಮೊದಲ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ತಿರುವಿನಂಚಿಗೆ ಡಿಕ್ಕಿ ಹೊಡೆದು ಅರ್ಧ ಭಾಗ ಮುಂದಕ್ಕೆ ಚಲಿಸಿ ನಿಂತಿದೆ.

ಸಿನಿಮೀಯ ಶೈಲಿಯಲ್ಲಿ ನಡೆದ ಘಟನೆಯನ್ನು ಕಂಡ ಇತರ ವಾಹನ ಪ್ರಯಾಣಿಕರು ಕೂಡಲೇ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಇಳಿಸಿದ್ದಾರೆ.ಕ್ಷಣಾರ್ಧದಲ್ಲಿ ನಡೆದು ಹೋಗುತ್ತಿದ್ದ ಭೀಕರ ದುರಂತದಿಂದ ಪಾರಾದ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟರು.

 

ಇದನ್ನು ಓದಿ: Karnataka: ರಾಜ್ಯೋತ್ಸವ ಹೊತ್ತಲ್ಲಿ ಕರ್ನಾಟಕಕ್ಕೆ ಹೊಸ ಹೆಸರು ನಾಮಕರಣ ?! ಅರೆ ಏನಿದು ಶಾಕಿಂಗ್ ನ್ಯೂಸ್ ?

You may also like

Leave a Comment