Home » Shivmogga Airport: ಮುಚ್ಚುವ ಹಂತಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ?! ಇನ್ನು ಒಂದು ತಿಂಗಳು ಮಾತ್ರ ಕಾರ್ಯಾಚರಣೆ !!

Shivmogga Airport: ಮುಚ್ಚುವ ಹಂತಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ?! ಇನ್ನು ಒಂದು ತಿಂಗಳು ಮಾತ್ರ ಕಾರ್ಯಾಚರಣೆ !!

1 comment
Shivmogga Airport

Shivmogga Airport: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ(B S Yadiyurappa) ಕನಸಿನ ಕೂಸಾಗಿ ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಉದ್ಘಾಟನೆಗೊಂಡ ಶಿವಮೊಗ್ಗದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಮೂಲಸೌಕರ್ಯ, ಭದ್ರತಾ ವ್ಯವಸ್ಥೆ ಕೊರತೆಯುಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಮುಚ್ಚುವ ಹಂತಕ್ಕೆ ಬಂದು ತಲುಪಿದೆ.

ಹೌದು, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ(Shivmogga Airport) ವಿಮಾನಗಳ ಹಾರಾಟಕ್ಕೆ ಇದ್ದ ಪರವಾನಗಿ ಇದೇ ತಿಂಗಳಾಂತ್ಯಕ್ಕೆ ಮುಕ್ತಾಯವಾಗಲಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು (ಕೆಎಸ್ಐಐಡಿಸಿ) ಪರವಾನಿಗೆಯನ್ನು ನವೀಕರಿಸಲು ವಿಫಲವಾದರೆ, ವಿಮಾನ ನಿಲ್ದಾಣದಿಂದ ವಿಮಾನ ಕಾರ್ಯಾಚರಣೆಗಳ ಮೇಲೆ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಅಂದಹಾಗೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಡಿಜಿಸಿಎ ನೀಡಿದ್ದ ಅನುಮತಿ ಕಳೆದ ತಿಂಗಳು ಆಗಸ್ಟ್‌ 23ಕ್ಕೆ ಮುಕ್ತಾಯವಾಗಿತ್ತು. ಮತ್ತೆ ಅನುಮತಿ ನವೀಕರಿಸಲು ಕೋರಿದಾಗ ಮೂಲಸೌಕರ್ಯ ಮತ್ತು ಭದ್ರತಾ ವ್ಯವಸ್ಥೆಗಳನ್ನು ಸರಿಪಡಿಸಲು ಸೂಚಿಸಿ, ಕೇವಲ ಒಂದು ತಿಂಗಳ ಅವಧಿ ವಿಸ್ತರಿಸಿತ್ತು.

You may also like

Leave a Comment