Home » Lipstick Ban: ಮಹಿಳೆಯರಿಗೆ ಅಘಾತ – ರಾಜ್ಯದಲ್ಲಿ ಲಿಪ್ಸ್ಟಿಕ್ ಬ್ಯಾನ್ ಮಾಡಲು ಸರ್ಕಾರದ ಚಿಂತನೆ !!

Lipstick Ban: ಮಹಿಳೆಯರಿಗೆ ಅಘಾತ – ರಾಜ್ಯದಲ್ಲಿ ಲಿಪ್ಸ್ಟಿಕ್ ಬ್ಯಾನ್ ಮಾಡಲು ಸರ್ಕಾರದ ಚಿಂತನೆ !!

0 comments

Lipstick Ban: ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಹ ಅನೇಕ ವಸ್ತುಗಳನ್ನು, ತಿನಿಸುಗಳನ್ನು ಬ್ಯಾನ್ ಮಾಡಿಕೊಂಡು ಬರುತ್ತಿದೆ. ಇತ್ತೀಚಿಗಷ್ಟೇ ಹೋಟೆಲ್ಗಳಲ್ಲಿ ಇಡ್ಲಿ ತಯಾರಿಕೆಯಲ್ಲಿ ಬಳಸುತ್ತಿದ್ದ ಪ್ಲಾಸ್ಟಿಕ್ ಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ಕಾರಣ ಪ್ಲಾಸ್ಟಿಕ್ ಗಳನ್ನು ನಿಷೇಧಿಸಲಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ನಿರ್ಧಾರ ಕೈಗೊಂಡಿರುವ ಸರ್ಕಾರ ಲಿಪ್ಸ್ಟಿಕ್( Lipstick Ban)ಅನ್ನು ಬ್ಯಾನ್ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಹೌದು, ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸಲು ಸಹಾಯಕವಾಗಿರುವ ಲಿಪ್ಸ್ಟಿಕ್, ಲಿಪ್ ಕೇರ್ ಹಾಗೂ ಕಾಸ್ಮೆಟಿಕ್ಸ್ ಗಳನ್ನು ನಿಷೇಧಿಸಲು ಮುಂದಾಗಿದ್ದು, ಈ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಸರ್ಕಾರಕ್ಕೆ ಕಠಿಣ ಕಾನೂನು ಜಾರಿ ತರಲು ಪತ್ರ ಬರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇತ್ತೀಚಿಗೆ ಬ್ರಾಂಡ್ ಗಳ ಹೆಸರಿನಲ್ಲಿ ನಕಲಿ ಪ್ರೋಡಕ್ಟ್ ಗಳು ಮಾರುಕಟ್ಟೆಗೆ ಬರುತ್ತಿದ್ದು, ಇದರಿಂದ ನಾನಾ ರೀತಿಯ ತೊಂದರೆಗಳು ಉಂಟಾಗುತ್ತಿದೆ. ಈ ಹಿನ್ನಲೆ ಕಳಪೆ ಗುಣಮಟ್ಟದ ಕಾಸ್ಮೆಟಿಕ್ಸ್ ಗಳಿಗೆ ಬ್ರೇಕ್ ಹಾಕುವಂತೆ ಕೋರಿ ಕೇಂದ್ರಕ್ಕೆ ಸಚಿವ ಗುಂಡುರಾವ್ ಪತ್ರ ಬರೆಯಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ.

You may also like