Shocking news: ಸಂಬಂಧಗಳು ಎನ್ನುವುದೇ ಹಾಗೆ. ಕೆಲವೊಮ್ಮೆ ನಮಗೆ ತಿಳಿಯದೆ, ಅನಿರೀಕ್ಷಿತವಾಗಿ ಎಲ್ಲೋ ಇರುವವು ಹೇಗೋ ಹತ್ತಿರಾಗಿಬಿಡುತ್ತೇವೆ. ಹೊಸ ರಿಲೇಷನ್ ಶಿಪ್ ಕ್ರಿಯೆಟ್ ಆಗುತ್ತದೆ. ಒಂದು ಬೆಸುಗೆ ಬೆಸೆದುಕೊಳ್ಳುತ್ತದೆ. ಆದರೆ ಕೆಲವೊಮ್ಮೆ ಕೆಲವೊಂದು ಘಟನೆಗಳಿಂದ, ನಿರೀಕ್ಷಿಸದಿರುವ ಸಂದರ್ಭಗಳಿಂದ ಆ ಸಂಬಂಧ ಕಡಿದು ಹೋಗುತ್ತದೆ. ಇದೀಗ ಅಂತದೇ ಒಂದು ಅಪರೂಪದ ಹಾಗೂ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಹೌದು, ಹುಟ್ಟಿದಬ್ಬ, ಮದುವೆ ದಿನದ ಸಂಭ್ರದಲ್ಲಿ ಹೆಂಡತಿಯರು ಗಂಡಂದಿರಿಂದ ವಿಶೇಷ ಉಡುಗೊರೆಯನ್ನು ಬಯಸುವುದು ಸಹಜ. ಅಂತೆಯೇ ಪತಿಯೊಬ್ಬ ತನ್ನ ಹೆಂಡತಿಯ ಹುಟ್ಟುಹಬ್ಬಕ್ಕಾಗಿ ಆಕೆಯನ್ನು ಸಂತೋಷ ಪಡಿಸಲು ಸಪ್ರೈಸ್ ನೀಡಲು ಮುಂದಾಗಿದ್ದಾನೆ. ಬಳಿಕ ಆಕೆಗೆ ವಿಶೇಷವಾದ ಗಿಫ್ಟ್ ಒಂದನ್ನೂ ನೀಡಿದ್ದಾನೆ. ಆದರೆ ಆತ ಕೊಟ್ಟ ಆ ಗಿಫ್ಟ್ ಅವರಿಬ್ಬರನ್ನು ದೂರಮಾಡಿದ್ದು, ಇಬ್ಬರಿಗೂ ಡಿವೋರ್ಸ್ ನೀಡಿದೆ. ಹಾಗಿದ್ರೆ ಗಂಡ ಕೊಟ್ಟ ಗಿಫ್ಟ್ ಏನು? ಅದು ಅವರಿಬ್ಬರನ್ನು ಯಾಕೆ ಬೇರೆ ಮಾಡಿತು? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.
ಅಂದಹಾಗೆ ಅಲಿಸಿಟಿಕೌಂಟರ್ ಹೆಸರಿನ ಡೇಟಿಂಗ್ ವೆಬ್ಸೈಟ್ (Website) ನಲ್ಲಿ ವ್ಯಕ್ತಿಯೊಬ್ಬ ತನ್ನ ಬದುಕಿನ ದುರಂತ ಕಥೆಯೊಂದನ್ನು ಹಂಚಿಕೊಂಡಿದ್ದು, ತನ್ನ ಪತ್ನಿಯ ಹುಟ್ಟುಹಬ್ಬದ ದಿನದಂದು ಪತ್ನಿಗೆ ಡೋರ್ ಬೆಲ್ ಅನ್ನು ಉಡುಗೊರೆಯಾಗಿ ನೀಡಿದ್ದಾನೆ. ಆ ಡೋರ್ ಬೆಲ್ ಸಾಮಾನ್ಯದ್ದಲ್ಲ. ಇದು ಬಾಗಿಲಿಗೆ ಬರುವ ವ್ಯಕ್ತಿಗಳ ಫೋಟೋ, ವಿಡಿಯೋ ಸೆರೆ ಹಿಡಿಯುವಂತಹದ್ದು. ಅಂದ್ರೆ ಡೋರ್ ಬೆಲ್ ಗೆ ಕ್ಯಾಮರಾ ಅಳವಡಿಸಲಾಗಿತ್ತು. ಪತಿ ನೀಡಿದ ಡೋರ್ ಬೆಲ್ ಸ್ವೀಕರಿಸಿದ ಪತ್ನಿ ಅದನ್ನು ಮನೆ ಮುಂದೆ ಹಾಕಿದ್ದಾಳೆ.
ಡೋರ್ ಬೆಲ್ ಕ್ಯಾಮರಾ ಮೂಲಕ ಮನೆಯಲ್ಲಿ ಏನು ನಡಿತಿದೆ ಅನ್ನೋದು ಪತಿಯ ಮೊಬೈಲ್ ನಲ್ಲಿ ಕಾಣಿಸ್ತಿತ್ತು. ಆರಂಭದಲ್ಲಿ ಎಲ್ಲವೂ ಸರಿ ಇತ್ತು. ಆದ್ರೆ ಒಂದು ದಿನ ಮನೆಗೆ ಅಪರಿಚಿತ ವ್ಯಕ್ತಿ ಬಂದಿದ್ದನ್ನು ಆತ ಕ್ಯಾಮರಾ ಮೂಲಕ ನೋಡಿದ್ದಾನೆ. ಮೊದಲು ಮನೆ ಬಾಗಿಲು ಬೆಲ್ ಆಗಿದೆ. ನಂತ್ರ ಅಪರಿಚಿತ ವ್ಯಕ್ತಿ ಕಾಣಿಸಿಕೊಂಡಿದ್ದಾನೆ. ಮನೆ ಬಾಗಿಲನ್ನು ತೆಗೆದ ಪತ್ನಿ ಹೊರಗೆ ಬಂದಿದ್ದಾಳೆ. ಅಷ್ಟೇ ಅಲ್ಲ ಬೆಲ್ಗೆ ಹಾಕಿದ್ದ ಕ್ಯಾಮರಾ ಮುಂದೆಯೇ ಅಪರಿಚಿತ ವ್ಯಕ್ತಿ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾಳೆ. ಪತ್ನಿಯ ಈ ವರ್ತನೆ ನೋಡಿ ಪತಿ ಕಂಗಾಲಾಗಿದ್ದಾನೆ. ಪತ್ನಿ ತನಗೆ ಮೋಸ ಮಾಡಿದ್ದಾಳೆ ಎಂಬ ಸತ್ಯ ಆತನಿಗೆ ಗೊತ್ತಾಗಿದೆ. ಬಳಿಕ ಮನೆಗೆ ಬಂದು ಎಲ್ಲಾ ಸತ್ಯ ಬಯಲು ಮಾಡಿ ವಿಚ್ಛೇದನ ನೀಡುವ ನಿರ್ಧಾರ ಮಾಡಿದ್ದಾನೆ.
ಹೀಗೆ ಕೆಲವೊಮ್ಮೆ ಬದುಕನ್ನು ಆನಂದಿಸಲು ನಾವು ಕೊಡುವ ಉಡುಗೊರೆಗಳೇ ನಮ್ಮ ಸಂಬಂಧಗಳಿಗೆ ಅಂತ್ಯ ಹಾಡಬಹುದು. ಈ ನೈಜ ಘಟನೆ ಪ್ರತಿಯೊಬ್ಬರಿಗೂ ಬಹಳ ದೊಡ್ಡ ಪಾಠವನ್ನು ಕಲಿಸಿಕೊಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಇದನ್ನು ಓದಿ: TV Addiction: ಮೊಬೈಲ್ ನಲ್ಲಿ ಅದನ್ನು ನೋಡುತ್ತಾ ಜೀವಕ್ಕೇ ಕುತ್ತು ತಂದ್ಕೊಂಡ ಮಹಿಳೆ !! ಆಕೆ ಮಾಡಿದ್ದೇನು ಗೊತ್ತಾ ?!
