Home News ಮಂಗಳೂರು-ಕಾಸರಗೋಡು ಪ್ರಯಾಣಿಕರಿಗೆ ಶಾಕಿಂಗ್‌ ನ್ಯೂಸ್‌

ಮಂಗಳೂರು-ಕಾಸರಗೋಡು ಪ್ರಯಾಣಿಕರಿಗೆ ಶಾಕಿಂಗ್‌ ನ್ಯೂಸ್‌

KSRTC

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಮಂಗಳೂರಿನಿಂದ ಕಾಸರಗೋಡಿಗೆ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಬಿಗ್‌ ಶಾಕಿಂಗ್‌ ನ್ಯೂಸೊಂದನ್ನು ನೀಡಿದೆ. ಮಂಗಳೂರು-ಕಾಸರಗೋಡು ಪ್ರಯಾಣ ಇನ್ನು ಮುಂದೆ ದುಬಾರಿಯಾಗಲಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಟಿಕೆಟ್‌ ದರವನ್ನು ಹೆಚ್ಚು ಮಾಡಿದ್ದಾರೆ. ಮಂಗಳೂರು-ಕಾಸರಗೋಡು ಮಾರ್ಗದ ಕುಂಬಳದಲ್ಲಿ ಅಧಿಕೃತವಾಗಿ ಟೋಲ್‌ ಸಂಗ್ರಹ ಆರಂಭವಾಗುವ ಮೊದಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಜ.20 ರಿಂದಲೇ ಟೋಲ್‌ ಮೊತ್ತವನ್ನು ಸೇರಿಸುವ ಮೂಲಕ ಪರಿಷ್ಕೃತ ದರವನ್ನು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಗ್ರಹ ಮಾಡಲು ಪ್ರಾರಂಭ ಮಾಡಿದೆ. ಇದರ ಜೊತೆಗೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಕೂಡ ಟಿಕೆಟ್‌ ದರದಲ್ಲಿ ಕೂಡಾ ಬದಲಾವಣೆ ತಂದಿದೆ.

ಕುಂಬಳದಿಂದ ಮಂಗಳೂರಿಗೆ ಈ ಹಿಂದೆ ರೂ.67 ಇದ್ದ ಪ್ರಯಾಣ ದರವನ್ನು ಈಗ ರೂ.75 ಕ್ಕೆ ಹೆಚ್ಚಳ ಮಾಡಿದೆ.

ರಾಜಹಂಸ ಬಸ್​​ಗಳ ದರವನ್ನು ಕೂಡ 10 ರೂ. ವರೆಗೆ ಹೆಚ್ಚಿಸಿದೆ. 80 ರೂ.ನಿಂದ 90 ರೂ.ಗೆ ಏರಿಕೆಯಾಗಿದೆ. ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳು ಟಿಕೆಟ್ ದರವನ್ನು 7 ರೂ. ಹೆಚ್ಚಿಸಿದ್ದು ಈಗಾಗಲೇ ಈ ದರ ಜಾರಿಯಲ್ಲಿದೆ. ಕಾಸರಗೋಡು-ಮಂಗಳೂರು ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಕರ್ನಾಟಕ ಸಾರಿಗೆ ಬಸ್‌ಗಳು ಸಂಪೂರ್ಣವಾಗಿ ಸರ್ವಿಸ್ ರಸ್ತೆಗಳಲ್ಲಿ ಸಂಚರಿಸುತ್ತವೆ. ಕುಂಬಳ ಟೋಲ್ ಗೇಟ್ ಬಿಟ್ಟು ಬೇರೆ ಯಾವುದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಬಸ್ಸುಗಳು ಹೋಗುವುದಿಲ್ಲ. ಹಾಗಾಗಿ ಟೋಲ್ ವಿನಾಯಿತಿ ನೀಡಬೇಕು ಎಂದು ಹೇಳಿದ್ದಾರೆ. ಒಂದು ವೇಳೆ ಈ ಬದಲಾವಣೆಯನ್ನು ಮಾಡದಿದ್ದರೆ, ಹೆಚ್ಚಿನ ಟಿಕೆಟ್ ದರಗಳ ಮೂಲಕ ಪ್ರಯಾಣಿಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯನ್ನು ಹಾಕಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕಾಸರಗೋಡು ಮಾರ್ಗದಲ್ಲಿ ಪ್ರತಿದಿನ ಸುಮಾರು 35 ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರಿಸುತ್ತದೆ. ಟೋಲ್ ಪಾವತಿಗಾಗಿ ದಿನಕ್ಕೆ ಸುಮಾರು 48,000 ರೂ. ವ್ಯಯ ಮಾಡುತ್ತಿದೆ. ಹೆದ್ದಾರಿಯನ್ನು ಬಳಸದಿದ್ದರೂ ಟೋಲ್ ಶುಲ್ಕವನ್ನು ಪಾವತಿಸಬೇಕಾಗಿರುವುದರಿಂದ ದರ ಏರಿಕೆ ಮಾಡುವ ಅನಿರ್ವಾಯವಾಗಿದೆ. ಕೇರಳದ ಕೆಎಸ್‌ಆರ್‌ಟಿಸಿ ಬಸ್‌ಗಳು ಸಹ ಇದೇ ಮಾರ್ಗದಲ್ಲಿ ಸಂಚಾರ ಮಾಡುತ್ತದೆ. ಅದಕ್ಕೂ ಕೂಡ ಟೋಲ್​ ದರ ಇದೆ. ಅವರು ಯಾವುದೇ ಟಿಕೆಟ್​​​ ದರ ಹೆಚ್ಚು ಮಾಡಿಲ್ಲ. ಟಿಕೆಟ್ ದರಗಳನ್ನು ಪರಿಷ್ಕರಿಸಬೇಕಾದರೆ, ಸಾರಿಗೆ ಸಚಿವರು ಇಲಾಖಾ ಸಭೆ ನಡೆಸಿ, ನಿರ್ಧಾರ ತೆಗೆದುಕೊಂಡು ಅದಕ್ಕೆ ಅನುಗುಣವಾಗಿ ಅಧಿಕೃತ ಆದೇಶಗಳನ್ನು ಹೊರಡಿಸಬೇಕು ಎಂದು ಕಾಸರಗೋಡು ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಟಿವಿ9 ವರದಿ ಮಾಡಿದೆ.