3
Gold loan: ವಾಯಿದೆ ಮುಕ್ತಾಯದ ನಂತರ ಅಸಲು ಪಾವತಿ ಕಡ್ಡಾಯ ಮಾಡಲಾಗಿದೆ. ಬ್ಯಾಂಕುಗಳಲ್ಲಿ ಪಡೆದುಕೊಳ್ಳುವ ಚಿನ್ನಾಭರಣ ಸಾಲವನ್ನು (Gold loan) ನಿಗದಿತ ಅವಧಿಯ ಕೊನೆಗೆ ಬಡ್ಡಿ ಮಾತ್ರ ಪಾವತಿಸಿ ಗ್ರಾಹಕರು ನವೀಕರಿಸುತ್ತಿದ್ದರು. ಆದರೆ ಇನ್ಮುಂದೆ ಬಡ್ಡಿಯನ್ನಷ್ಟೇ ಪಾವತಿಸಿ ಸಾಲ ನವೀಕರಿಸುವಂತಿಲ್ಲ ಎಂದು ಆರ್.ಬಿ.ಐ. ಬ್ಯಾಂಕುಗಳಿಗೆ ತಾಕೀತು ಮಾಡಿದೆ. ಸಾಲ ಪಡೆದವರು ಬಡ್ಡಿಯ ಜೊತೆಗೆ ಪೂರ್ಣ ಪ್ರಮಾಣದಲ್ಲಿ ಸಾಲದ ಅಸಲು ಪಾವತಿಸಬೇಕು. ನಂತರ ಹೊಸ ಅರ್ಜಿ ಸಲ್ಲಿಸಿ ಮತ್ತೆ ಸಾಲ ಪಡೆಯಬಹುದು ಎಂದು ಆರ್.ಬಿ.ಐ ತಿಳಿಸಿದೆ.
