Marriage: ವಯಸ್ಸಿನಲ್ಲಿ ಅಂತರವಿದ್ದು ವಿವಾಹವಾಗುವ ಜೋಡಿಯ ಬಗ್ಗೆ ಹಲವು ಮಾಹಿತಿ ಕೇಳಿದ್ದೇವೆ. ಆದರೆ, ಇಲ್ಲೊಬ್ಬ 66 ವರ್ಷದ ವ್ಯಕ್ತಿ ಮಗಳ ಗೆಳತಿಯನ್ನೇ ಮದುವೆಯಾಗಿರುವ (Marriage) ಘಟನೆ ಬೆಳಕಿಗೆ ಬಂದಿದೆ. 66 ವರ್ಷದ ಪಂಡಿತ್ ರಿಚರ್ಡ್ ಕೀ ಎಂಬಾತನೇ ಮಗಳ ಗೆಳತಿಯನ್ನೇ ಮದುವೆಯಾದ ವ್ಯಕ್ತಿ. ಈತ ಬಿ ಇನ್ ಫುಟ್‌ಬಾಲ್ ಸ್ಪೋಟ್ಸ್‌ನ ನಿರೂಪಕ.
ರಿಚರ್ಡ್ ಮೊದಲ ಪತ್ನಿ ಜೂಲಿಯಾ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಈ ವೇಳೆ ರಿಚರ್ಡ್ ಗೆ ಮಗಳ ಗೆಳತಿ ಲೂಸಿ ರೋಸ್ ಪರಿಚಯವಾಗಿ, ಆಕೆಯ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದರು. ಲೂಸಿ ವಕೀಲೆಯಾಗಿದ್ದಾಳೆ. ತನ್ನ ಗೆಳತಿಯೊಡನೆ ತಂದೆಯ ಸಂಬಂಧ ತಿಳಿದ ಮದ್ಯದ ದಾಸಿಯಾಗಿದ್ದ ಮಗಳು ಜೆಮ್ಮಾ ಮತ್ತಷ್ಟು ಕುಗ್ಗಿ ಮದ್ಯದ ಕಡಲಲ್ಲಿ ಮುಳುಗಿದಳು.
ಮಗಳ ಪ್ರಾಯದ ಹುಡುಗಿಯ ಜತೆ ಸಂಬಂಧ ಇರುವುದು ತಿಳಿದ ಪತ್ನಿ ಜೂಲಿಯಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ರಿಚರ್ಡ್ ಪತ್ನಿ ಜೊತೆಗಿನ 34 ವರ್ಷದ ಸಂಬಂಧವನ್ನು ಮುರಿದುಕೊಂಡರು. ಪತ್ನಿಯಿಂದ ದೂರಾಗಿ ಇದೀಗ ಜೂನ್ 24 ರಂದು 30 ವರ್ಷದ ಯುವತಿ ಲೂಸಿ ರೋಸ್ ಜೊತೆ ರಿಚರ್ಡ್ ಹಸೆಮಣೆ ಏರಿದ್ದಾರೆ.
ಆದರೆ, ಈ ಮದುವೆಗೆ ರಿಚರ್ಡ್ ಪುತ್ರಿ ಜೆಮ್ಮಾ ಬಂದಿಲ್ಲ.
ಅದ್ದೂರಿಯಾಗಿ ಮದುವೆಯಾದ ಇವರ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಪತಿಯ ಮದುವೆಯ ಬಗ್ಗೆ ಮಾತನಾಡಿದ ಮೊದಲ ಪತ್ನಿ ಕಣ್ಣೀರು ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನು ಓದಿ: TV Remote: ರಿಮೋಟ್ ಕಂಟ್ರೋಲ್ ಇಲ್ಲದೇ ಟಿವಿ ಆನ್/ ಆಫ್ ಮಾಡ್ಬೋದು: ಎಷ್ಟು ಈಸಿ ಅಲ್ವಾ
