Home » Ramayana: ‘ರಾಮಾಯಣ’ ಸಿನಿಮಾದ ಶೂಟಿಂಗ್‌: ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ನಟ ಯಶ್ ಭೇಟಿ

Ramayana: ‘ರಾಮಾಯಣ’ ಸಿನಿಮಾದ ಶೂಟಿಂಗ್‌: ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ನಟ ಯಶ್ ಭೇಟಿ

0 comments

Ramayana: ನಟ ಯಶ್(Actor Yash) ಮಧ್ಯಪ್ರದೇಶದ(MP) ಮಹಾಕಾಳೇಶ್ವರ(Mahakaleshwara) ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. “ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ” ಎಂದು ದೇವರ ದರ್ಶನದ ಬಳಿಕ ಯಶ್ ಹೇಳಿದ್ದಾರೆ. ಏಪ್ರಿಲ್ 22ರಂದು ಯಶ್ ಮುಂಬೈನಲ್ಲಿ ‘ರಾಮಾಯಣ’ ಸಿನಿಮಾದ ಶೂಟಿಂಗ್‌ನಲ್ಲಿ(Movie Shooting) ಭಾಗಿಯಾಗಲಿದ್ದಾರೆ. ಯಶ್ ‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರ ನಿಭಾಯಿಸುತ್ತಿದ್ದು, ರಾವಣನೂ ಸಹ ಶಿವನ ಭಕ್ತ ಎನ್ನುವುದು ಗಮನಾರ್ಹ.

ಇದೇ ವೇಳೆ, ಮಧ್ಯಪ್ರದೇಶ ಸಿಎಂ ಡಾ.ಮೋಹನ್ ಯಾದವ್ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿದ್ದಾರೆ. “ನಿಮ್ಮ ಅತ್ಯುತ್ತಮ ನಟನೆಯಿಂದ ಸಿನಿಮಾರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವ ನಿಮಗೆ ಶುಭಾಶಯಗಳು” ಎಂದು ಮೋಹನ್ ಯಾದವ್ ಹೇಳಿದ್ದಾರೆ.

You may also like