Home » Shravani Acharya: ಸಮೀರ್ ಆಚಾರ್ಯ, ಮನೆಯವರಿಂದ ಹಲ್ಲೆ ಆರೋಪ – ಮರುದಿನ ಮತ್ತೊಂದು ವಿಡಿಯೋ ಹಂಚಿಕೊಂಡ ಪತ್ನಿ, ವಿಡಿಯೋ ನೋಡಿ ನೆಟ್ಟಿಗರು ಶಾಕ್ !!

Shravani Acharya: ಸಮೀರ್ ಆಚಾರ್ಯ, ಮನೆಯವರಿಂದ ಹಲ್ಲೆ ಆರೋಪ – ಮರುದಿನ ಮತ್ತೊಂದು ವಿಡಿಯೋ ಹಂಚಿಕೊಂಡ ಪತ್ನಿ, ವಿಡಿಯೋ ನೋಡಿ ನೆಟ್ಟಿಗರು ಶಾಕ್ !!

12 comments

Shravani Acharya: ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ(Sameer Acharya) ಹಾಗೂ ಶ್ರಾವಣಿ(Shravani) ಸಮೀರ್ ಆಚಾರ್ಯ ದಂಪತಿ ಕನ್ನಡ ಕಿರುತೆರೆಯಲ್ಲಷ್ಟೇ ಅಲ್ಲದೇ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಫೇಮಸ್‌. ಸಂಗೀತ, ಭಜನೆ ಹಾಡುತ್ತಾ ದೇಶ ದೇಶ ಸುತ್ತುತ್ತಾ ಜನರನ್ನು ರಂಜಿಸಿ ತಾವೂ ಸಂತೋಷವಾಗಿದ್ದ ಜೋಡಿ ಇದು. ಆದೀಗ ಈ ಜೋಡಿಗಳ ನಡುವೆ ಕಲಹವೇರ್ಪಟ್ಟಿದೆ.

ಹೌದು, ಪತ್ನಿ ಶ್ರಾವಣಿ ಸಮೀರ್ ಆಚಾರ್ಯ(Sameer Acharya) ಮೇಲೆ ಸಮೀರ್ ಆಚಾರ್ಯ ತಂದೆ-ತಾಯಿಯ ಜೊತೆಗೂಡಿ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದು, ಇದು ಪೋಲೀಸ್ ಠಾಣೆಯ ಮೆಟ್ಟಿಲನ್ನೂ ಏರಿ ಗಂಡ-ಹೆಂಡತಿಯರ ಈಗ ನಡುವೆ ರಾಜಿ ಕೂಡ ಆಗಿದೆ. ಆದರೀಗ ಈ ಬೆನ್ನಲ್ಲೇ ಸಮೀರ್ ಆಚಾರ್ಯನ ಪತ್ನಿ ಶ್ರಾವಣಿ ಅವರು ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ಅಂದಹಾಗೆ ಮಗು ನೋಡಿಕೊಳ್ಳುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಕುಟುಂಬದಲ್ಲಿ ಕಲಹ ಪ್ರಾರಂಭವಾಗಿದೆ ಸಮೀರನ ಪತ್ನಿ ಶ್ರಾವಣಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಲೈವನಲ್ಲಿದ್ದ ವೇಳೆ ಸಮೀರ್ ಹಾಗೂ ಅವರ ತಂದೆ ತಾಯಿ ಸೇರಿಕೊಂಡು ಮನ ಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಶ್ರಾವಣಿ(Shravani Acharya) ಆರೋಪಿಸಿದ್ದಾರೆ. ಗಲಾಟೆ ವೇಳೆ ಶ್ರಾವಣಿ ಅವರಿಗೆ ಕೈ, ಮುಖಕ್ಕೆ ಗಾಯವಾದರೆ ಅವರ ಮಾವನ ತಲೆಗೆ ಏಟು ಬಿದ್ದಿದೆ. ಈ ಕುರಿತು ಸಮೀರ ಪತ್ನಿ ಶ್ರಾವಣಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಆದರೆ ಮಹಿಳಾ ಠಾಣೆ ಅಧಿಕಾರಿಗಳು ಕೌನ್ಸ್‌ಲಿಂಗ್ ಮೂಲಕ ದಂಪತಿಯನ್ನ ಒಂದು ಮಾಡಿದ್ದಾರೆ. ಕೊಟ್ಟ ಕಂಪ್ಲೇಂಟ್‌ ವಾಪಸ್ ಪಡೆದು ಮತ್ತೊಮ್ಮೆ ಹೀಗೆ ಮಾಡದಂತೆ ಅರ್ಜಿ ಬರೆದುಕೊಟ್ಟು ವಾಪಸ್ ಮನೆಗೆ ತೆರಳಿದ್ದಾರೆ.

ಈ ಘಟನೆ ನಡೆದ ಮಾರನೇ ದಿನವೇ ಶ್ರಾವಣಿ ಆಚಾರ್ಯ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ಶ್ರಾವಣಿಯ ಫಾಲೋವರ್ಸ್ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಸಲಿಗೆ ಕಾರಣವೇನು ಅಂದರೆ, ಈ ವಿಡಿಯೋದಲ್ಲಿ ಶ್ರಾವಣಿ ಮಗಳೊಂದಿಗೆ ಖುಷಿ ಖುಷಿಯಾಗಿ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದೇ ವಿಡಿಯೋದಲ್ಲಿ ಪತಿ ಸಮೀರ್ ಆಚಾರ್ಯ ಕೂಡ ಕಾಣಿಸಿಕೊಂಡಿದ್ದಾರೆ.
ನಿನ್ನೆ ಜಗಳ ಆಡಿಕೊಂಡಿವರು, ಇವತ್ತು ಜಂಟಿಯಾಗಿ ಕಾಣಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಅಲ್ಲಿದೆ ಒಂದೇ ವಿಡಿಯೋವನ್ನು ಇಬ್ಬರೂ ಶೇರ್ ಮಾಡಿಕೊಂಡಿರುವುದು ವಿಶೇಷ.

ಇದನ್ನು ನೋಡಿ ನೆಟ್ಟಿಗರು ಕಾಮೆಂಟ್ ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. “ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ ಅಂತ ನ್ಯೂಸ್ ಬಂತು. ನೋಡಿದರೆ, ಇಬ್ಬರೂ ಖುಷಿ ಖುಷಿಯಾಗಿದ್ದಾರೆ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ನ್ಯೂಸ್‌ನಲ್ಲಿ ಇರೋದು ಸತ್ಯ. ಇವರು ಏನೂ ಗಲಾಟೆ ಆಗಿಲ್ಲ ಅಂತ ಸಾಬೀತು ಮಾಡುವುದಕ್ಕೆ ಹಳೆಯ ವಿಡಿಯೋ ಬಿಟ್ಟಿದ್ದಾರೆ ಅಷ್ಟೇ.” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

You may also like

Leave a Comment