Home » Ax-4 Mission: ‘ಜೈ ಹಿಂದ್, ಜೈ ಭಾರತ್‌’ ಎಂದು ಹೇಳಿ ಬಾಹ್ಯಾಕಾಶಕ್ಕೆ ಹಾರಿದ ಶುಭಾಂಶು ಶುಕ್ಲಾ – ಎರಡನೇ ಭಾರತೀಯನಾಗಿ ಇತಿಹಾಸ ನಿರ್ಮಾಣ

Ax-4 Mission: ‘ಜೈ ಹಿಂದ್, ಜೈ ಭಾರತ್‌’ ಎಂದು ಹೇಳಿ ಬಾಹ್ಯಾಕಾಶಕ್ಕೆ ಹಾರಿದ ಶುಭಾಂಶು ಶುಕ್ಲಾ – ಎರಡನೇ ಭಾರತೀಯನಾಗಿ ಇತಿಹಾಸ ನಿರ್ಮಾಣ

0 comments

Ax-4 Mission: ಹಲವು ವಿಳಂಬಗಳ ನಂತರ, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರನ್ನು ಹೊತ್ತ ಆಕ್ಸಿಯಮ್ -4 ಮಿಷನ್ ಬುಧವಾರ ಮಧ್ಯಾಹ್ನ 12:01 ಕ್ಕೆ ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಉಡಾವಣಾ ಸಂಕೀರ್ಣ 39A ನಿಂದ ಹಾರಿತು.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ಹಾರಿದ ನಂತರ ಗಗನಯಾತ್ರಿ ಶುಭಾಂಶು ಶುಕ್ಲಾ ಭಾರತೀಯರನ್ನು ಹಿಂದಿಯಲ್ಲಿ ಉದ್ದೇಶಿಸಿ, “ನಾವು 40 ವರ್ಷಗಳ ನಂತರ ಬಾಹ್ಯಾಕಾಶಕ್ಕೆ ಮರಳಿದ್ದೇವೆ. ಇದೀಗ, ನಾವು ಸೆಕೆಂಡಿಗೆ 7.5 ಕಿಲೋಮೀಟರ್ ವೇಗದಲ್ಲಿ ಭೂಮಿಯನ್ನು ಸುತ್ತುತ್ತಿದ್ದೇವೆ. ಕಮಾಲ್ ಕಿ ರೈಡ್ ಥಿ! (ಇದು ಅದ್ಭುತವಾದ ಸವಾರಿ!)” ಎಂದರು. “ನನ್ನೊಂದಿಗೆ ತ್ರಿವರ್ಣ ಧ್ವಜವಿದೆ, ನಾನು ನಿಮ್ಮೆಲ್ಲರೊಂದಿಗಿದ್ದೇನೆ ಎಂದು ಅದು ನನಗೆ ಹೇಳುತ್ತಿದೆ… ಜೈ ಹಿಂದ್! ಜೈ ಭಾರತ್!” ಎಂದು ಅವರು ಹೇಳಿದರು. ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯರಾಗಿದ್ದಾರೆ.

“ಇದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನನ್ನ ಪ್ರಯಾಣದ ಆರಂಭ ಮಾತ್ರವಲ್ಲ – ಇದು ಭಾರತದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮದ ಆರಂಭ, ಮತ್ತು ನೀವೆಲ್ಲರೂ ಈ ಪ್ರಯಾಣದ ಭಾಗವಾಗಬೇಕೆಂದು ನಾನು ಬಯಸುತ್ತೇನೆ, ಎಂದು ಶುಕ್ಲಾ ಹೇಳಿದರು,

ಇದನ್ನೂ ಓದಿ:Weather Report: ನಾಳೆ ಬೆಳಿಗ್ಗೆವರೆಗೆ ಕರ್ನಾಟಕದ ಹವಾಮಾನ ಹೇಗಿದೆ? ಯಾವೆಲ್ಲಾ ಭಾಗದಲ್ಲಿ ಮಳೆ ಜಾಸ್ತಿ?

You may also like