Home » ನಾಳೆ ಸಿದ್ದರಾಮಯ್ಯ ಜತೆ ಡಿ.ಕೆ.ಶಿವಕುಮಾರ್‌ಗೂ ಪದಗ್ರಹಣ..!?

ನಾಳೆ ಸಿದ್ದರಾಮಯ್ಯ ಜತೆ ಡಿ.ಕೆ.ಶಿವಕುಮಾರ್‌ಗೂ ಪದಗ್ರಹಣ..!?

0 comments
Siddaramaiha and DK Shivakumar

ಬೆಂಗಳೂರು : ನಾಳೆ ಮುಖ್ಯಮಂತ್ರಿ (Chief Minister)ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ಜತೆ ಡಿ.ಕೆ.ಶಿವಕುಮಾರ್‌ (DK Sivakumar)ಪದಗ್ರಹಣ ನಡೆಸುವ ಸಾಧ್ಯತೆಯಿದೆ ಎಂದು ತಿಳಿಯಲಾಗಿದೆ.

ಮೇ.10ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದಿದ್ದು, ಮೇ 13ರಂದು ಫಲಿತಾಂಶ ಹೊರ ಬಂದಿದ್ದು, ಕಾಂಗ್ರೆಸ್‌ ಭಾರೀ ಬಹು ಮತದೊಂದಿಗೆ ಗೆಲುವನ್ನು ಸಾಧಿಸಿದೆ. ಈ ಬೆನ್ನಲ್ಲೆ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ‍& ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಸ್‌ ನಡೆಯಿತು . ರಾಜ್ಯ ರಾಜಕೀಯದಲ್ಲಿ ಕರ್ನಾಟಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಫಿಕ್ಸ್‌ ಆಗಿದ್ದು ಹೈಕಮಾಂಡ್‌ ಘೋಷಣೆಯೊಂದೆ ಬಾಕಿಯಿದೆ ಎನ್ನುಲಾಗಿದ್ದು, ಅಲ್ಲದೇ ನಾಳೆಯೇ ಪ್ರಮಾಣವಚನ ನಡೆಸುವ ಸಾಧ್ಯತೆಯಿದ್ದು ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ. ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣವಚನ ಸಂದರ್ಭದಲ್ಲೇ ಸಿದ್ದರಾಮಯ್ಯ ಜತೆಯಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೂ ಪದಗ್ರಹಣ ನಡೆಸುವ ಸಾಧ್ಯತೆಯಿದೆ, ವರಿಷ್ಟರ ಜೊತೆ ಚರ್ಚಿಸಿ ನಂತ್ರ ತೀರ್ಮಾಣ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ನಾಳೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮಧ್ಯಾಹ್ನ3.30ಕ್ಕೆ ಪ್ರಮಾಣ ವಚನ ಸಾಧ್ಯತೆಯಿದೆ ವರದಿಯಾಗಿದೆ.

ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಫಿಕ್ಸ್‌ ಸುದ್ದಿ ಕೇಳುತ್ತಿದ್ದಂತೆ ಕುಮಾರಕೃಪದಲ್ಲಿರುವ ಸಿದ್ದರಾಮಯ್ಯ ನಿವಾಸಕ್ಕೆ ನೂರಾರು ಅಭಿಮಾನಿಗಳು ಆಗಮಿಸುತ್ತಿದ್ದಾರೆ ಸಿದ್ದರಾಮಯ್ಯ ನಿವಾಸದಲ್ಲಿ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ಸಿದ್ದರಾಮಯ್ಯ ಫೆಕ್ಸ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆಯಿಂದ ಒಂದು ಕೆಎಸ್‌ ಆರ್‌ಪಿ, ಸೇರಿದಂತೆ ಹೆಚ್ಚಿನ ಪೊಲೀಸ್‌ ಭದ್ರತೆ ನೀಡಲಾಗಿದೆ.

You may also like

Leave a Comment