Home » Siddaramaiah Biopic: ‘ಲೀಡರ್ ರಾಮಯ್ಯ’ ಆಗಿ ತೆರೆಮೇಲೆ ಬರ್ತಿದ್ದಾರೆ ಸಿದ್ದರಾಮಯ್ಯ! ಸಿದ್ದು ಪಾತ್ರಕ್ಕೆ ಬಣ್ಣ ಹಚ್ತಾರೆ ಈ ಸೂಪರ್ ಸ್ಟಾರ್ !

Siddaramaiah Biopic: ‘ಲೀಡರ್ ರಾಮಯ್ಯ’ ಆಗಿ ತೆರೆಮೇಲೆ ಬರ್ತಿದ್ದಾರೆ ಸಿದ್ದರಾಮಯ್ಯ! ಸಿದ್ದು ಪಾತ್ರಕ್ಕೆ ಬಣ್ಣ ಹಚ್ತಾರೆ ಈ ಸೂಪರ್ ಸ್ಟಾರ್ !

by ಹೊಸಕನ್ನಡ
0 comments
Siddaramaiah Biopic

Siddaramaiah Biopic : ಕರ್ನಾಟಕದ(Karnataka) ಮಾಜಿ ಮುಖ್ಯಮಂತ್ರಿ(Ex CM), ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಜೀವನಾಧಾರಿತ ಸಿನಿಮಾ (Siddaramaiah Biopic) ತೆರೆಮೇಲೆ ಬರಲಿದೆ ಎಂಬ ವಿಚಾರ ಕೆಲವು ಸಮಯಗಳ ಹಿಂದೆ ಭಾರಿ ಸುದ್ದಿ ಮಾಡಿತ್ತು. ಇದೀಗ ಈ ಕುರಿತು ಒಂದು ಬಿಗ್ ಅಪ್‌ಡೇಟ್ ಸಿಕ್ಕಿದ್ದು ಸಿದ್ದರಾಮಯ್ಯ ಬಯೋಪಿಕ್‌ಗೆ ಟೈಟಲ್ ಕೂಡ ಫಿಕ್ಸ್ ಆಗಿದೆ. ಅವರ ಹುಟ್ಟುಹಬ್ಬಕ್ಕೆ (ಆ.3) ಈ ಸಿನಿಮಾವನ್ನು ತೆರೆಗೆ ತರುವುದಕ್ಕೆ ಸಕಲ ಪ್ರಯತ್ನಗಳು ಆರಂಭವಾಗಿವೆ.

ಹೌದು, ಇಷ್ಟು ದಿನ ರಾಜಕೀಯ ವೇದಿಕೆಗಳಲ್ಲಿ, ಸಭೆ ಸಮಾರಂಭಗಳಲ್ಲಿ ಆರ್ಭಟಿಸುತ್ತಿದ್ದ ಟಗರು, ಇನ್ನು ಕೆಲವೇ ದಿನಗಳಲ್ಲಿ ಬೆಳ್ಳಿತೆರೆಮೇಲೆ ಆರ್ಭಟಿಸಲಿದೆ. ಯಾಕೆಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಸಿನಿಮಾವೊಂದು ಸೆಟ್ಟೇರಲು ಸಿದ್ಧವಾಗಿದೆ. ಈ ಚಿತ್ರಕ್ಕೆ ‘ಲೀಡರ್‌ ರಾಮಯ್ಯ'(Leader Siddaramaiah) ಎಂಬ ಟೈಟಲ್ ಫಿಕ್ಸ್‌ ಮಾಡಲಾಗಿದೆ. ‘ಎ ಕಿಂಗ್ ರೈಸ್ಡ್ ಬೈ ದ ಪೀಪಲ್’ ಎಂಬ ಅಡಿ ಬರಹವಿದೆ. ಎಂ.ಎಸ್. ಕ್ರಿಯೇಟಿವ್ ವರ್ಕ್ಸ್ ಬ್ಯಾನರ್ ಅಡಿ ಸಿನಿಮಾ ತಯಾರಾಗುತ್ತಿದ್ದು ಸತ್ಯರತ್ನಂ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಅಂದಹಾಗೆ ಪೋಸ್ಟರ್‌ನಲ್ಲಿ ಮೈಸೂರು(Mysore) ತಾಲೂಕು ಪಂಚಾಯತ್‌ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸುತ್ತಿರುವವರಿಗೆ ಪೊಲೀಸರು ಲಾಠಿಚಾರ್ಜ್‌ ಮಾಡುತ್ತಿರುವ ದೃಶ್ಯ ಕುತೂಹಲ ಮೂಡಿಸಿದೆ. ಇದು ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿದೆ. ಸದ್ಯ ಸಿನಿಮಾದ ಮೊದಲ ಪೋಸ್ಟರ್ ಕೂಡ ರಿಲೀಸ್ ಆಗಿದೆ.

ಈ ಕುರಿತು ನಿರ್ದೇಶಕ ಸತ್ಯ ರತ್ನಂ(Satya Ratna) ಮಾತನಾಡಿ ‘ಇಂದು (ಮಾ.30) ಶ್ರೀರಾಮ ನವಮಿ ಪ್ರಯುಕ್ತ ಸಿದ್ದರಾಮಯ್ಯ ಬಯೋಪಿಕ್‌ನ ಫಸ್ಟ್ ಲುಕ್ ಮತ್ತು ಟೈಟಲ್ ಘೋಷಣೆ ಮಾಡಲಾಗಿದೆ. ಈಗ ಭಾಗ ಒಂದು ಎಂದು ಸಿನಿಮಾ ಆರಂಭಿಸಿದ್ದೇವೆ. ಅದರಲ್ಲಿ ಸಿದ್ದರಾಮಯ್ಯ ಅವರ ಬಾಲ್ಯದ ದಿನಗಳು ಕಾಲೇಜು, ಲಾಯರ್ ಆಗಿದ್ದ ದಿನಗಳು, ನಂಜುಂಡಸ್ವಾಮಿ ಅವರ ಜೊತೆಗಿನ ಹೋರಾಟಗಳು, ರಾಜಕೀಯಕ್ಕೆ ಅವರು ಬಂದಿದ್ದು ಹೇಗೆ ಎಂಬುದರ ಕುರಿತಾಗಿ ಇರುತ್ತದೆ’ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಮಾಸ್‌ ಲೀಡರ್‌. ಒಬ್ಬ ಲೀಡರ್ ಯಾವ ರೀತಿ ಹುಟ್ಟುತ್ತಾನೆ ಅನ್ನೋದೇ ಕಥೆ. ಜನರಿಂದ ಒಬ್ಬ ರಾಜ ಹುಟ್ಟುತ್ತಾನೆ. ಆ ಕಾರಣಕ್ಕೆ ಲೀಡರ್ ರಾಮಯ್ಯ ಎಂದು ಟೈಟಲ್ ಇಟ್ಟಿದ್ದೇವೆ. ಮುಂದಿನ ವಾರವೇ ಚಿತ್ರದ ಹೀರೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಸಿದ್ದರಾಮಯ್ಯ ಅವರು ‘ಇದೆಲ್ಲ ಯಾಕೆ’ ಅಂತಲೇ ಹೇಳುತ್ತಾರೆ. ಯಾವುದೇ ವಿವಾದ ಇಲ್ಲ ಎಂದು ಅವರಿಗೆ ಮನವೊಲಿಸಿ, ಅವರ ಒಪ್ಪಿಗೆ ಪಡೆದುಕೊಂಡಿದ್ದೇವೆ. ಈ ಸಿನಿಮಾ ಟ್ರೇಲರ್ ಅನ್ನು ಅರಮನೆ ಮೈದಾನದಲ್ಲೇ ದೊಡ್ಡ ಕಾರ್ಯಕ್ರಮ ಮಾಡಿ ಬಿಡುಗಡೆ ಮಾಡಲಿದ್ದೇವೆ’ ಎಂದು ಸತ್ಯ ರತ್ನಂ ತಿಳಿಸಿದ್ದಾರೆ.

ಅಂದಹಾಗೆ ಬಯೋಪಿಕ್‌ ಎಂದರೆ ಆ ವ್ಯಕ್ತಿಯ ಪಾತ್ರದಲ್ಲಿ ನಟಿಸುವ ನಟ ಅಥವಾ ನಟಿ ಯಾರು ಎಂಬ ಪ್ರಶ್ನೆ ಉದ್ಭವ ಆಗುವುದು ಸಹಜ. ಇದೀಗ ಈ ಚಿತ್ರದ ವಿಚಾರದಲ್ಲಿ ಕೂಡಾ ಅದೇ ಪ್ರಶ್ನೆ ಎದುರಾಗಿದೆ. ಈ ಕುರಿತು ಮಾತನಾಡಿದ ಸತ್ಯ ರತ್ನ ‘ಪಾರ್ಟ್ 1ರಲ್ಲಿ ಯಂಗ್ ಆಗಿರುವ ನಟ ಬೇಕಿದೆ. ಹಾಗಾಗಿ, ಕನ್ನಡದ ಹೊಸ ನಟರೊಬ್ಬರು ಸಿದ್ದರಾಮಯ್ಯನವರ ಪಾತ್ರ ಮಾಡಲಿದ್ದಾರೆ. ತಮಿಳಿನ ವಿಜಯ್ ಸೇತುಪತಿ(Vijay Setupati) ಅವರು ಪಾರ್ಟ್ 2ರಲ್ಲಿ ಇರಲಿದ್ದಾರೆ. ಶ್ರೀರಾಮ ನವಮಿ ಪ್ರಯುಕ್ತ ಈಗ ಟೈಟಲ್ ರಿಲೀಸ್ ಮಾಡಿದ್ದೇವೆ. ಪಾರ್ಟ್ 1ರಲ್ಲೂ ವಿಜಯ್ ಸೇತುಪತಿ ಇರುತ್ತಾರೆ. ಅದರ ಬಗ್ಗೆ ಕುತೂಹಲ ಇರಲಿ. ಮುಂದಿನ ದಿನಗಳಲ್ಲಿ ಅದನ್ನು ಬಹಿರಂಗಪಡಿಸಲಿದ್ದೇವೆ’ ಎಂದು ಹೇಳಿದ್ದಾರೆ.

You may also like

Leave a Comment