Home » CM Siddaramaiha: 5 ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ – ಹೈಕಮಾಂಡ್ ಮುಂದೆ ಯಾವ ಬದಲಾವಣೆಯೂ ಇಲ್ಲ – ಶಾಸಕ ಯತೀಂದ್ರ

CM Siddaramaiha: 5 ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ – ಹೈಕಮಾಂಡ್ ಮುಂದೆ ಯಾವ ಬದಲಾವಣೆಯೂ ಇಲ್ಲ – ಶಾಸಕ ಯತೀಂದ್ರ

by V R
0 comments

CM siddaramaiha: ನನ್ನ ಪ್ರಕಾರ ಸಿಎಂ ಆಗಿ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ. ಸಿಎಂ ಬದಲಾವಣೆ ಹೈ ಕಮಾಂಡ್ ಮುಂದೆ ಇಲ್ಲ.

ಎಐಸಿಸಿ ಸೆಕ್ರೆಟ್ರಿ ಈಗಾಗಲೇ ಇದನ್ನ ಸ್ಪಷ್ಟ ಪಡಿಸಿದ್ದಾರೆ ಎಂದು

ಮೈಸೂರಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಯಾರ್ರಿ ಹೇಳಿದ್ದು ಮುಖ್ಯಮಂತ್ರಿ ಆದವರನ್ನ ಓಬಿಸಿ ಕಮಿಟಿಗೆ ಕಳುಹಿಸಿದ್ರೆ ಪ್ರಮೋಷನ್ ಅಂತ.

ಕೇಂದ್ರ ಓಬಿಸಿ ಕಮಿಟಿಗೆ ಸಿದ್ದರಾಮಯ್ಯ ನೇಮಕ ಪ್ರಶ್ನೆಗೆ ಕೆಂಡಮಂಡಲರಾದ ಸಿಎಂ ಪುತ್ರ ಯತೀಂದ್ರ, ಸಿಎಂ‌ ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ.

ದೇಶದಲ್ಲಿರುವ ಹಿಂದುಳಿದ ವರ್ಗಗಳ ನಾಯಕರು ಆ ಕಮಿಟಿಯಲ್ಲಿದ್ದಾರೆ.

ಹಾಗಾಗಿ ಅಲ್ಲಿ ಸದಸ್ಯರಾಗಿರುತ್ತಾರೆ.

ಪ್ರಮೋಷನ್ ಅಲ್ವಾ ಎಂಬ ಪ್ರಶ್ನೆಗೆ ಅದು ಪ್ರಮೋಷನಾ ನೀವೇ ಕಾಮನ್ ಸೆನ್ಸ್ ಉಪಯೋಗಿಸಿ ಎಂದು ಯತೀಂದ್ರ ಕೋಪಗೊಂಡರು.

ಅದಕ್ಕೂ ಸಿಎಂ ಬದಲಾವಣೆ ವಿಚಾರಕ್ಕೂ ಸಂಬಂಧ ಕಲ್ಪಿಸುವ ಅಗತ್ಯ ಇಲ್ಲ. ನೀವುಗಳೇ ಅದನ್ನ ಊಹೆ ಮಾಡಿಕೊಡರೆ ಹೇಗೆ?

ಚರ್ಚೆ ಮಾಡುವವರಿಗೂ ಕಾಮನ್ ಸೆನ್ಸ್ ಇರಬೇಕಲ್ವ.

ಯಾವ ಆಧಾರದಲ್ಲಿ ಈಗೆ ಹೇಳುತ್ತಿದ್ದಾರೆ.

ಬಿಜೆಪಿ ಹೇಳೋದನ್ನೆಲ್ಲ ನೀವು ನಂಬಿದ್ರೆ ಆಗಲ್ಲ ಎಂದು ಕಿಡಿ ಕಾರಿದರು.

ನಮ್ಮ‌ ಸರ್ಕಾರ ಬಂದಾಗಿಂದ ಸರ್ಕಾರ ಬದಲಾಗುತ್ತೆ, ಸಿಎಂ ಬದಲಾಗ್ತಾರೆ ಅಂತಿದ್ದಾರೆ.

ನವೆಂಬರ್ ತಿಂಗಳಿಗೆ ನಮ್ಮ ತಂದೆ ಎರಡುವರೆ ವರ್ಷ ಪೂರೈಕೆ ಮಾಡ್ತಾರೆ. ಹಾಗಾಗಿ ಸಿಎಂ ಆಸೆ ಇಟ್ಟುಕೊಂಡಿರೋರು ಕೇಳ್ತಾರೆ.

ಕೇಳೋದ್ರಲ್ಲ ತಪ್ಪಿಲ್ಲ, ತೀರ್ಮಾನ ಮಾಡೋದು ಹೈಕಮಾಂಡ್ ಹಾಗೂ ಶಾಸಕರುಗಳು. ಸರ್ಕಾರ ಬಂದಾಗಿದ ಈ ಪ್ರಶ್ನೆಗೆ ಉತ್ತರ ಮಾಡುತ್ತಿದ್ದೇನೆ ದಯವಿಟ್ಟು ಆ ಪ್ರಶ್ನೆ ಕೇಳಬೇಡಿ ಎಂದು ಯತೀಂದ್ರ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಖಡಕ್ ಆಗಿ ಎಚ್ಚರಿಸಿದರು.

ಉಚಿತ ಭಾಗ್ಯಗಳಿಂದ ಜನ ಸೋಮಾರಿ ಆಗುತ್ತಿದ್ದಾರೆ.

ರಂಭಾಪುರಿ ಶ್ರೀಗಳ ಹೇಳಿಕೆ ವಿಚಾರಕ್ಕೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಇದನ್ನ ಈಗಲ್ಲ, ಕಳೆದ ಬಾರಿ ಭಾಗ್ಯಗಳನ್ನ ಕೊಟ್ಟಾಗಲೂ ಈಗೇ ಹೇಳುತ್ತಿದ್ರು. ಯಾರಾದ್ರು ಸೋಮಾರಿಗಳಾದ್ರ? ಆಗಲ್ಲ.

ಬಡವರು ಹೊಟ್ಟೆ ತುಂಬು ಊಟ ತಿಂದು ಸೋಂಬೇರಿ ಆಗೋದಿಲ್ಲ ಎಂದರು.

ಕೇವಲ ಅಕ್ಕಿ ಕೊಟ್ಟ ತಕ್ಷಣ ಎಲ್ಲ ಸಿಗುತ್ತಾ? ಜೀವನಕ್ಕಾಗಿ ಅವರು ದುಡಿಯುತ್ತಾರೆ. ಇದು ತಲತಲಾಂತರದಿಂದ ಬೇರೊಬ್ಬರ ಕೈಲಿ ದುಡಿಸಿಕೊಂಡು ಸುಖವಾಗಿ ಬಂದಿರೋರು ಹೇಳುವ ಮಾತುಗಳು. ಇದೇ ಪ್ರಶ್ನೆಯನ್ನ ಶ್ರೀಮಂತರ ಸಾಲ ಮನ್ನ ಮಾಡುವ ಕೆಂದ್ರ ಸರ್ಕಾರಕ್ಕೆ ಕೇಳಿ. ಆವಾಗ ಕೇಳದ ಇವರಿಗೆ ಬಡವರಿಗೆ ಕೊಟ್ಟಾಗೆ ಯಾಕೆ ಕಣ್ಣುರಿ. ಯಾರು ಏನೇ ಟೀಕೆ ಮಾಡಿದ್ರು ನಾವು ಕೊಟ್ಟೇ ಕೊಡ್ತೀವಿ ಎಂದು ರಂಭಾಪುರಿ ಶ್ರೀಗಳ ಹೇಳಿಕೆಗೆ ಯತೀಂದ್ರ ಖಾರವಾದ ತಿರುಗೇಟು ನೀಡಿದರು.

ಇದನ್ನೂ ಓದಿ: CM Siddaramiah : ಕೇಂದ್ರ ಸರ್ಕಾರಕ್ಕೆ 7 ಬೇಡಿಕೆಗಳ ಪಟ್ಟಿಸಿಎಂ ಸಿದ್ದರಾಮಯ್ಯ 7 ಸಲ್ಲಿಸಿದ CM ಸಿದ್ದರಾಮಯ್ಯ- ಇಲ್ಲಿದೆ ಲಿಸ್ಟ್

You may also like