Home » ಸಿಡಿಲು ಬಡಿದು ಯುವಕ ಮೃತ್ಯು

ಸಿಡಿಲು ಬಡಿದು ಯುವಕ ಮೃತ್ಯು

0 comments

ಮಂಗಳೂರು : ಸಿಡಿಲು ಬಡಿದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಹರೇಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾನದಬೆಟ್ಟು ಎಂಬಲ್ಲಿ ರವಿವಾರ ಸಂಜೆ ಸಂಭವಿಸಿದೆ.

ಮೃತ ಯುವಕನನ್ನು ಹರೇಕಳ ಗಾನದಬೆಟ್ಟು ಎಂಬಲ್ಲಿಯ ಹಸನಬ್ಬ ಎಂಬವರ ಪುತ್ರ ಅಬ್ದುಲ್ ರಹ್ಮಾನ್ (33) ಎಂದು ಗುರುತಿಸಲಾಗಿದೆ.

ರಹ್ಮಾನ್ ಅವರು ಗದ್ದೆಯಲ್ಲಿ ಕಟ್ಟಿದ್ದ ದನವನ್ನು ಬಿಡಿಸಿಕೊಂಡು ಮನೆಯತ್ತ ಬರುವ ವೇಳೆ ಸಿಡಿಲು ಬಡಿದಿದ್ದು, ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅವರು ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.

ರಹ್ಮಾನ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಶಾಸಕ ಯು.ಟಿ.ಖಾದರ್, ರೆವೆನ್ಯೂ ಇಸ್ಪೆಕ್ಟರ್ ಪ್ರಸಾದ್, ಹರೇಕಳ ಪಂಚಾಯತ್ ಅಧ್ಯಕ್ಷ, ಅಧಿಕಾರಿಗಳು ಭೇಟಿ ನೀಡಿದ್ದಾರೆ.

You may also like

Leave a Comment