Adhar Card : ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ನವೆಂಬರ್ 1ನೇ ತಾರೀಖಿನಿಂದ ಆಧಾರ್ ಕಾರ್ಡ್ ಸಂಬಂಧಿಸಿ ಹೊಸ ನಿಯಮ ಜಾರಿಗೆ ತಂದಿದೆ.
ಹೌದು, ಹೌದು, ಇದೀಗ UIDAI ಆಧಾರ್ ಅಪ್ಡೇಟ್ ಮತ್ತು ಬಯೋಮೆಟ್ರಿಕ್ ಅಪ್ಡೇಟ್‌ಗಳಿಗೆ ಸಂಬಂಧಿಸಿ ಹೊಸ ನಿಯಮ ಜಾರಿಗೆ ತಂದಿದೆ. ಇದರ ಪ್ರಕಾರ ಆಧಾರ್ ಕಾರ್ಡ್ ಹೊಂದಿರುವವರು ಸೇವಾ ಕೇಂದ್ರಗಳಿಗೆ ಭೇಟಿ ನೀಡದೆಯೇ, ಆನ್‌ಲೈನ್ ಮೂಲಕವೇ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ ಮತ್ತು ಮೊಬೈಲ್ ನಂಬರ್‌ಗಳನ್ನು ಅಪ್ಡೇಟ್ ಮಾಡಬಹುದು. ಇದು ಬಳಕೆದಾರರಿಗೆ ಅನುಕೂಲ ಮತ್ತು ಅಪ್ಡೇಟ್ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಲಿದೆ.
ಅಲ್ಲದೆ ಜೂನ್ 14, 2025ರವರೆಗೆ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡಲು ಅವಕಾಶ ನೀಡಿತ್ತು. ಆದ್ರೆ ಇದೀಗ ಈ ಗಡುವು ಮುಕ್ತಾಯವಾಗಿದ್ದು, ಇನ್ಮೇಲೆ ಯಾವುದೇ ಅಪ್ಡೇಟ್‌ಗಳಿಗೂ ಹಣ ಪಾವತಿ ಮಾಡಬೇಕು. ಅಂದರೆ ಆಧಾರ್ ಅಪ್ಡೇಟ್‌ನಲ್ಲಿ ಶುಲ್ಕ ಪರಿಷ್ಕರಣೆಯನ್ನು ನಡೆಸಿದೆ. ಈ ಮೂಲಕ ನವೆಂಬರ್ 1 ರಿಂದ ಹೆಸರು, ವಿಳಾಸ, ಜನ್ಮ ದಿನಾಂಕ ಅಥವಾ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವಂತಹ ‘ಡೆಮೋಗ್ರಾಫಿಕ್ ಅಪ್‌ಡೇಟ್’ಗೆ ₹50 ಬದಲಿಗೆ ₹75 ರೂ. ಪಾವತಿ ಮಾಡಬೇಕಾಗುತ್ತದೆ. ಅದೇ ರೀತಿ, ಬಯೋಮೆಟ್ರಿಕ್ ಅಪ್‌ಡೇಟ್‌ಗಳ ಶುಲ್ಕವನ್ನೂ ₹100 ರಿಂದ ₹125ಕ್ಕೆ ಏರಿಕೆ ಮಾಡಲಾಗಿದೆ.
