12
ಶಿರಸಿ (ಉತ್ತರ ಕನ್ನಡ): ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾಗಿ ಪರಿಗಣಿತವಾಗಿರುವ, ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆ ಈ ಬಾರಿ 2026ರ ಫೆ. 24ರಿಂದ ಮಾ.4ರವ ರೆಗೆ ಜರುಗಲಿದೆ.
ದೇವಾಲಯದ ಸಭಾಂಗಣ ದಲ್ಲಿ ಭಾನುವಾರ ನಡೆದ ಜಾತ್ರಾ ಮಹೋತ್ಸವ ಮುಹೂರ್ತ ಸಭೆಯಲ್ಲಿ ಈ ನಿಶ್ಚಯ ಬಗ್ಗೆ ವಿಧ್ಯುಕ್ತವಾಗಿ ಘೋಷಣೆ ಮಾಡಲಾಯಿತು. ಫೆ.25ರಂದು ರಥೋತ್ಸವ ಜರುಗಲಿದ್ದು, ನಂತರ ಜಾತ್ರಾ ಗದ್ದುಗೆಯಲ್ಲಿ ದೇವಿ ಪ್ರತಿಷ್ಠಾಪನೆ ನೆರವೇರಲಿದೆ. ಫೆ. 26ರಂದು ದೇವಿ ದರ್ಶನ ಮತ್ತು ಪೂಜಾ ಸೇವೆ, ಹರಕೆಗಳ ಸಮರ್ಪಣೆ ಪ್ರಾರಂಭವಾಗಲಿದೆ ಎಂದು ಪ್ರಕಟಿಸಲಾಯಿತು. ಇದೇ ಸಂದರ್ಭದಲ್ಲಿ ಮಾರಿಕಾಂಬಾ ಸಭಾಮಂಟಪದಲ್ಲಿ ಜಾತ್ರಾ ಮಹೋತ್ಸವ ನಿಶ್ಚಯ ಸಂಕೇತವಾಗಿ ದೀಪ ಬೆಳಗಲಾಯಿತು.
