ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಕೊಲೆ,ಅತ್ಯಾಚಾರ ನಡೆದ ಶವಗಳನ್ನು ಹೂತ ಬಗೆಗೆ SIT ತನಿಖೆ ಶುರುವಾಗಿಯೇ ಬಿಟ್ಟಿದೆ. ನೂರಾರು ಶವ ಹೂತಿದ್ದೇನೆಂದು ಹೇಳಿರುವ ಸಾಕ್ಷಿದಾರನು ಇಂದು ಮಂಗಳೂರಿನಲ್ಲಿರುವ ಮಲ್ಲಿಕಟ್ಟೆ ಎಸ್.ಐ.ಟಿ.ಕಛೇರಿಯಲ್ಲಿ ಡಿಐಜಿ ಅನುಚೇತ್ ಮುಂದೆ ಹಾಜರಾಗಿದ್ದಾರೆ. ಈ ಮೂಲಕ ಅನುಚೇತ್ ತನಿಖೆಗೆ ಚಾಲನೆ ನೀಡಿದ್ದಾರೆ.
ಸೌಜನ್ಯ ಹತ್ಯೆ ಆದಾಗ SIT ತನಿಖೆ ಕೈಗೆತ್ತಿಕೊಂಡಿದ್ದ ಆಗಿನ ಎಎಸ್ಪಿ ಅನುಚೇತ್ ರವರು ಇದೀಗ ಈ ಬಗೆಗಿನ ತನಿಖಾ ತಂಡದಲ್ಲಿರೋದು ವಿಶೇಷ.
ಡಿಐಜಿ ಅನುಚೇತ್ ಮುಂದೆ ಹೇಳಿಕೆ ದಾಖಲಿಸಲು ವ್ಯಕ್ತಿಯೊಬ್ಬ ಮುಸುಕು ಹಾಕಿಕೊಂಡು, ತಮ್ಮ ಲಾಯರ್ ಗಳೊಂದಿಗೆ, ಇಂದು ಜು.26ರರಂದು ಆಗಮಿಸಿದ್ದಾರೆ. ಈ ವ್ಯಕ್ತಿ ಎಸ್ ಐ ಟಿ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಲಿದ್ದಾರೆ ಎನ್ನುವ ಮಾಹಿತಿ ವರದಿಯಾಗಿವೆ
ಈ ಹಿಂದೆ ತಾಲೂಕ್ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಿದ ಈ ವ್ಯಕ್ತಿ ಇದೀಗ ಮತ್ತೊಮ್ಮೆ ವಿವರವಾಗಿ ಹೇಳಿಕೆ ದಾಖಲಿಸಲಿದ್ದಾರೆ. ಆ ಮೂಲಕ ರಾಷ್ಟ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ನರಮೇಧ ಪ್ರಕರಣದ ತನಿಖೆ ಶುರುವಾಗಿ ನೂರಾರು ಶವ ಹೂತು ಹಾಕಿದ್ದೇನೆ ಎಂದಿರುವ ಭೀಮನ ಹೇಳಿಕೆ ದಾಖಲು ಪ್ರಕ್ರಿಯೆ ಶುರುವಾಗಿದೆ.
ತನಿಖೆಯ ಮುಂದಿನ ನಡೆ ಹೇಗಿರಬಹುದು?
1. ಶವ ಹೂತು ಹಾಕಿದ್ದೇನೆ ಎನ್ನುತ್ತಿರುವ ಭೀಮನ ಹೇಳಿಕೆಗಳನ್ನು SIT ತಂದ ಸವಿಸ್ತಾರವಾಗಿ ಎಲ್ಲಾ ವಿವರಗಳಲ್ಲಿ ದಾಖಲು ಮಾಡಿಕೊಳ್ಳಲಿದೆ.
2. SIT ತಂಡದ ಮುಂದೆ ಹೂತು ಹಾಕಿದ ಶವಗಳ ಅಂದಾಜು ಸ್ಥಳವನ್ನು ಮಾತ್ರ ಆತ ಹೇಳಲಿದ್ದು, ಸ್ಥಳದ ಖಚಿತ ಮಾಹಿತಿಯನ್ನು ಸಮಾಧಿ ಅಗೆಯುವ ಸಂದರ್ಭ ಹೇಳುವ ಸಾಧ್ಯತೆಯೇ ಹೆಚ್ಚು. ಇಂಥಹಾ ಕಟು ಸತ್ಯಗಳನ್ನು ಆತ ನೇರವಾಗಿ ಸಮಾಧಿ ಅಗೆಯುವ ಸಂದರ್ಭ ಹೇಳುವ ಸಾಧ್ಯತೆ ಅಧಿಕ
3. ಶವ ಹೂಳಲು ಹೇಳಿದ್ದ ವ್ಯಕ್ತಿಗಳು ಯಾರೆಂದು SIT ತಂಡದ ಮುಂದೆ ಭೀಮ ಹೇಳಬೇಕಾಗುತ್ತದೆ. ಹಾಗಾಗಿ ಇಂದು ನಾಳೆಯ ಒಳಗೆ ಸಂಭಾವ್ಯ ಆರೋಪಿಗಳ ಪಟ್ಟಿ ಕೂಡಾ SIT ತಂಡಕ್ಕೆ ದೊರೆಯುವ ಸಾಧ್ಯತೆ ಇದೆ.
4. ಶವ ಹೂತು ಹಾಕಿದ ಕಾಲಮಾನದ, ಟೈಮ್ ಲೈನ್ ಬಗ್ಗೆ ಕೂಡಾ ವಿಚಾರಣೆ ನಡೆಯಲಿದೆ. ಯಾವ ವರ್ಷ, ಯಾವ ತಿಂಗಳು ಮುಂತಾದ ವಿವರಗಳನ್ನು SIT ದಾಖಲಿಸಿಕೊಳ್ಳಲಿದೆ
5. ಸತ್ತು ಹೋಗಿ ಹೂತು ಹಾಕಲ್ಪಟ್ಟಿರುವ ವ್ಯಕ್ತಿ ಗಂಡಾ, ಹೆಣ್ಣಾ, ಆತನ ಅಥವಾ ಅಂದಾಜು ಪ್ರಾಯ ಎಷ್ಟಿರಬಹುದು, ಇತ್ಯಾದಿ ವಿವರ ಚೆಹರೆ ಕೂಡಾ ಭೀಮನಿಂದ ಪೊಲೀಸರು ಪಡೆಯುವ ಸಾಧ್ಯತೆಯಿದೆ.
6. ಮೇಲಿನ ಎಲ್ಲಾ ವಿವರ ಸಂಗ್ರಹಿಸಿಕೊಂಡು ನಂತರವಷ್ಟೇ, ಶವ ಸಮಾಧಿ ಅಗೆಯಲು ಹೊರಡುವ ಸಾಧ್ಯತೆಯಿದೆ. ಅಲ್ಲದೆ ಭೀಮನು ಹಲವಾರು ಶವಗಳನ್ನು ತೋರಿಸುವ ಕಾರಣದಿಂದ ಯಾವ ಪ್ರದೇಶದಲ್ಲಿ ಮೊದಲಿಗೆ ಅಗೆತ ಶುರು ಮಾಡಬೇಕಿದೆ ಅನ್ನೋದನ್ನು ಕೂಡಾ SIT ತಂಡ ನಿರ್ಧರಿಸಬೇಕಿದೆ. ಇದೆಲ್ಲಾ ಕೆಲಸಗಳನ್ನು ತುರ್ತಾಗಿ ಮಾಡಬೇಕಿದ್ದು, ಇನ್ನು ಒಂದೆರಡು ದಿನಗಳಲ್ಲಿ ಮಹತ್ವದ ಆನ್ ಫೀಲ್ಡ್ ತನಿಖಾ ಕಾರ್ಯಗಳು ನಡೆಯಲಿವೆ ಎನ್ನಲಾಗಿದೆ.
