Mahesh Timarodi : ಧರ್ಮಸ್ಥಳ (Dharamasthala) ಪ್ರಕರಣ (Case) ಸಂಬಂಧ ಬುರುಡೆ ಚಿನ್ನಯ್ಯನ ಬಂಧನ ಬಳಿಕ ಎಸ್ಐಟಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Timarody) ಎಸ್ಐಟಿ ತನಿಖೆಯನ್ನು ದುರ್ಬಲ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಹೌದು, ‘S.I.T ದುರ್ಬಲ ಮಾಡುವ ಯತ್ನ ನಡೆಯುತ್ತಿದೆ’
S.I.T ತನಿಖೆ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿಗೆ ಆತಂಕ ವ್ಯಕ್ತಪಡಿಸಿದ್ದಾರೆ. ‘S.I.T ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಿದೆ. ಆದರೆ S.I.Tಯನ್ನು ದುರ್ಬಲ ಮಾಡುವ ಯತ್ನ ನಡೆಯುತ್ತಿದೆ. ಈ ಹುನ್ನಾರ ಮೆಟ್ಟಿ ನಿಲ್ಲಬೇಕಾದ ಅಗತ್ಯ ಹೋರಾಟಗಾರರಿಗೆ ಇದೆ’ ಎಂದು ಅವರು ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ:Bangalore: ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್ ಬೆಂಗಳೂರಲ್ಲಿ ಆರಂಭ
ಅಲ್ಲದೆ ಶೀಘ್ರವೇ ಬೆಳ್ತಂಗಡಿಯಲ್ಲಿ ಮೌನ ಪ್ರತಿಭಟನೆ ನಡೆಯಲಿದೆ. ಸೆಪ್ಟಂಬರ್ 16ರಂದು ಮಠ, ಮಂದಿರ, ದೈವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತೇವೆ. S.I.T ಅಧಿಕಾರಿಗಳಿಗೆ ಶಕ್ತಿ ನೀಡುವಂತೆ ಕೇಳಿಕೊಳ್ಳುತ್ತೇವೆ ಎಂದು ತಿಮರೋಡಿ ಹೇಳಿದ್ದಾರೆ.
