Home » Prajwal Revanna: ಪ್ರಜ್ವಲ್ ಡಿಮ್ಯಾಂಡ್ ಕೇಳಿ SIT ಶಾಕ್ – ಪ್ರಜ್ವಲ್ ಕೇಳಿದ್ದಾದ್ರೂ ಏನು?

Prajwal Revanna: ಪ್ರಜ್ವಲ್ ಡಿಮ್ಯಾಂಡ್ ಕೇಳಿ SIT ಶಾಕ್ – ಪ್ರಜ್ವಲ್ ಕೇಳಿದ್ದಾದ್ರೂ ಏನು?

0 comments
Prajwal Revanna

Prajwal Revanna: ದೇಶಾದ್ಯಂತ ಸಂಚಲನ ಸೃಷ್ಟಿಸಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಪ್ರಕರಣ, ಪ್ರಜ್ವಲ್ ಸೆರೆಂಡರ್ ಆಗುವ ಮೂಲಕ ಒಂದು ಹಂತಕ್ಕೆ ಸುಧಾರಿಸಿದೆ. ಇದೀಗ SIT ತನಿಖೆ ಶುರು ಮಾಡಿದೆ. ಆದರೆ ತನಿಖೆಗೆ ಸಹಕಾರ ನೀಡದೆ ಪ್ರಜ್ವಲ್ ಕಿರಿಕ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ಹಲವು ಸವಲತ್ತುಗಳನ್ನು ಅವರು ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Anaconda Video Viral: ರಸ್ತೆ ಮಧ್ಯೆ ಅಪಾಯಕಾರಿಯಾದ ದೈತ್ಯ ಹಾವು! ವಿಡಿಯೋ ವೈರಲ್!

ಎಸ್‌ ಐಟಿ(SIT) ಅಧಿಕಾರಗಳ ಜೊತೆಗೆ ಮೊದಲ ದಿನವೇ ಕಿರಿಕ್‌ ಮಾಡಿಕೊಂಡಿದ್ದ ಪ್ರಜ್ವಲ್ ಎಸ್‌ಐಟಿ ಕಚೇರಿಯಲ್ಲಿ ಶೌಚಾಲಯ, ಕೊಠಡಿ ಶುಚಿಯಾಗಿಲ್ಲ, ಕೆಟ್ಟ ವಾಸನೆ ಬರುತ್ತಿದೆ. ಎಸ್‌ಐಟಿ ಕಚೇರಿಯಲ್ಲಿ ಉಸಿರಾಡಲು ಕಷ್ಟವಾಗಿದೆ ಎಂದು ನ್ಯಾಯದೀಶರ ಮುಂದೆ ಗೋಳು ತೋಡಿಕೊಂಡಿದ್ದರು. ಇದಲ್ಲದೆ ಇದೀಗ ಪ್ರಜ್ವಲ್ ಹೊಸ ತಗಾದೆ ತೆಗೆದಿದ್ದು ಅವರು ಮಾಡುತ್ತಿರುವ ಡಿಮ್ಯಾಂಡ್ ಕಂಡು SIT ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಹೌದು, ಸಾಮಾನ್ಯರಿಗೆ ನೀಡುವಂತಹ ಕೊಠಡಿ ನೀಡಿರುವ ಹಿನ್ನೆಲೆ ಟಾಯ್ಲೆಟ್ ಹಾಗೂ ರೂಮ್ ವಿಚಾರವಾಗಿ ಮತ್ತೆ ಕಿರಿಕ್ ಮಾಡಿದ್ದಾರೆ. ‘ನಾನು ಹಿಂಗೆಲ್ಲ ಬದುಕಿಲ್ಲ. ನನಗೆ ಸರಿಯಾದ ಟಾಯ್ಲೆಟ್ ಹಾಗೂ ಮಲಗಲು ರೂಂ ಕೊಡಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಎಂದಿದ್ದಾರೆ. ಆದರೆ ಎಸ್‌ಐಟಿ ಅಧಿಕಾರಿಗಳು ಯಾವುದೇ ಆರೋಪಿಗಳಿಗೂ ರೂಮ್ ಅದೇ ಆಗಿರುತ್ತೆ. ನಿಮ್ಮ ತಂದೆಗೂ ಇದೇ ರೂಮ್ ಕೊಡಲಾಗಿತ್ತು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Hassan Lokasabha: ಹಾಸನದಲ್ಲಿ ಪ್ರಜ್ವಲ್ ಗೆ ಸೋಲೋ? ಗೆಲುವೋ? ಸಮೀಕ್ಷೆಗಳು ಹೇಳೋದೇನು?

You may also like

Leave a Comment