Site Sales: ಸತ್ಯಹಾರಿ ಮತ್ತು ಮಾಂಸಹಾರಿ ಊಟ ಎಂದು ನಾವು ಹೋಟೆಲ್ಗಳಲ್ಲಿ ಬೋರ್ಡ್ ಗಳನ್ನು ನೋಡಿರುತ್ತೇವೆ. ಇದಕ್ಕೂ ಹೊರತಾಗಿ ಕೆಲವರು ಬಾಡಿಗೆ ಮನೆಗಳಲ್ಲಿ ಸತ್ಯಹಾರಿಗಳಿಗೆ ಮಾತ್ರ ಎಂದು ಬೋರ್ಡ್ ಹಾಕಿರುವುದನ್ನು ನೋಡುತ್ತೇವೆ. ಆದರೆ ವಿಚಿತ್ರ ಎಂಬಂತೆ ಇದೀಗ ಸೈಟ್ ಮಾರಾಟ ಮಾಡಲು ಹೊರಟಿರುವವರು ಕೂಡ ಸತ್ಯಹಾರಿಗಳಿಗೆ ಮಾತ್ರ ಮಾರಾಟಕ್ಕಿದೆ ಎಂದು ಬೋರ್ಡ್ ಹಾಕಿಕೊಂಡಿದ್ದಾರೆ. ಸದ್ಯ ಈ ಜಾಹೀರಾತಿನ ಫಲಕ ಎಲ್ಲೆಡೆ ವೈರಲ್ ಆಗಿದೆ.
ಹೌದು, ಸಾಮಾನ್ಯವಾಗಿ ಜಾಗ ಸೈಟ್ ಮಾರಾಟದ ಜಾಹೀರಾತು ಫಲಕಗಳಲ್ಲಿ ಎಷ್ಟು ಜಾಗ ಸೇಲ್‌ಗಿದೆ, ಸ್ಥಳ ಎಲ್ಲಿ ಹಾಗೂ ಸಂಪರ್ಕ ವಿವರಗಳನ್ನು ನೀಡಲಾಗುತ್ತದೆ. ಆದ್ರೆ ಇಲ್ಲೊಂದು ಕಡೆ ಸಸ್ಯಹಾರಿಗಳಿಗೆ ಮಾತ್ರ ಜಾಗ ಮಾರಾಟಕ್ಕಿದೆ ಎಂಬ ಜಾಹೀರಾತನ್ನು ನೀಡಿದ್ದಾರೆ
ಅಂದಹಾಗೆ ಅಬಿ ಒಕ್ಕಲಿಗ ಎಂಬವರು ಈ ಕುರಿತ ಫೋಟೋವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ಫೋಟೋದಲ್ಲಿ “ಸೈಟ್ ಮಾರಾಟಕ್ಕಿದೆ, ಕೇವಲ ಸಸ್ಯಹಾರಿಗಳಿಗೆ ಮಾತ್ರ” ಎಂದು ಜಾಹೀರಾತು ನೀಡಿರುವ ದೃಶ್ಯವನ್ನು ಕಾಣಬಹುದು.
