Belthangady: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಆರೋಪ ಮಾಡಿರುವ ಅನಾಮಿಕ ವ್ಯಕ್ತಿ ನೀಡಿದ ದೂರಿನಲ್ಲಿ ಇದೀಗ ಎಸ್‌ಐಟಿ ತನಿಖೆ ತೀವ್ರಗೊಳಿಸಿದೆ. ಇದೀಗ 6ನೇ ಪಾಯಿಂಟ್‌ನಲ್ಲಿ ಮೂಳೆ ತರಹದ ವಸ್ತು ಪತ್ತೆಯಾಗಿದೆ. ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿರುವ ಕುರಿತು ಎಸ್‌ಐಟಿ ಮೂಲಗಳು ದೃಢಪಡಿಸಿದೆ.
ಪಾಯಿಂಟ್ ನಂಬರ್ 6 ರಲ್ಲಿ ಹಿಟಾಚಿ ಯಂತ್ರವನ್ನು ಬಳಸಿ ಉತ್ಖನನ ಕಾರ್ಯವನ್ನು ಮಾಡಿದ್ದು, ಒಂದೂವರೆ ಗಂಟೆಗಳ ತೀವ್ರ ಶೋಧದ ನಂತರ, ಮೂಳೆ ರೀತಿಯ ವಸ್ತು ಪತ್ತೆಯಾಗಿದೆ. ನಂತರ ಆ ವಸ್ತುವನ್ನು ಎಚ್ಚರಿಕೆಯಿಂದ ಸಂಗ್ರಹಿಸಿ, ಫಾರೆನ್ಸಿಕ್ ವಿಶ್ಲೇಷಣೆಗಾಗಿ ರವಾನಿಸಲಾಗಿದೆ. ಈ ಕಳೇಬರವು ಮಾನವನದ್ದೇ ಎಂಬುದನ್ನು ಖಚಿತಪಡಿಸಲು ಡಿಎನ್‌ಎ ಪರೀಕ್ಷೆ ಸೇರಿದಂತೆ ವೈಜ್ಞಾನಿಕ ವಿಶ್ಲೇಷಣೆ ನಡೆಸಲಾಗುವುದು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ದೇಹದ ಪೂರ್ತಿ ಭಾಗಗಳು ದೊರಕಿಲ್ಲ. ತಲೆ ಬುರುಡೆ ಸೇರಿ ಕೆಲವು ಭಾಗಗಳು ಮಾತ್ರ ದೊರಕಿದೆ. ಇನ್ನೂ ಆಳಕ್ಕೆ ತೆಗೆದು ಹುಡುಕಾಟ ನಡೆಸಲಾಗುತ್ತಿದೆ.
