Home » ಇನ್ಮುಂದೆ ಸ್ಮಾರ್ಟ್ ಫೋನ್ ಡಿಸ್​ಪ್ಲೇ ಒಡೆದರೆ ಚಿಂತೆ ಮಾಡೋ ಅಗತ್ಯವಿಲ್ಲಾ!!| ಹೊಸದಾಗಿ ಬರಲಿದೆಬಿರುಕು ಬಿಟ್ಟರೆ ಸ್ವಯಂ ಜೋಡಣೆಯಾಗೋ ಸ್ಮಾರ್ಟ್ ಡಿಸ್​ಪ್ಲೇ

ಇನ್ಮುಂದೆ ಸ್ಮಾರ್ಟ್ ಫೋನ್ ಡಿಸ್​ಪ್ಲೇ ಒಡೆದರೆ ಚಿಂತೆ ಮಾಡೋ ಅಗತ್ಯವಿಲ್ಲಾ!!| ಹೊಸದಾಗಿ ಬರಲಿದೆ
ಬಿರುಕು ಬಿಟ್ಟರೆ ಸ್ವಯಂ ಜೋಡಣೆಯಾಗೋ ಸ್ಮಾರ್ಟ್ ಡಿಸ್​ಪ್ಲೇ

by ಹೊಸಕನ್ನಡ
0 comments

ತಮ್ಮ ತಮ್ಮ ಮೊಬೈಲ್ ಫೋನ್ ಎಂದರೆ ಯಾರಿಗೆ ಪ್ರೀತಿಯಿಲ್ಲ ಹೇಳಿ. ಅದಕ್ಕೆ ಕಿಂಚಿತ್ತು ಸ್ಕ್ರ್ಯಾಚ್ ಅಥವಾ ಯಾವುದೇ ರೀತಿಯ ತೊಂದರೆಯಾಗಬಾರದೆಂದು ಸದಾ ಜೋಪಾನವಾಗಿಯೇ ನೋಡಿಕೊಳ್ಳುತ್ತೇವೆ.

ಒಂದೊಮ್ಮೆ ಕೈಜಾರಿ ಫೋನ್ ಬಿತ್ತೆಂದರೆ ಸಾಕು ಆಕಾಶ ಭೂಮಿ ಒಂದು ಮಾಡುತ್ತೇವೆ. ಯಾಕೆಂದರೆ ಎಲ್ಲರೂ ಮುಖ್ಯವಾಗಿ ಅದರ ಡಿಸ್​ಪ್ಲೇಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತೇವೆ. ಒಂದು ವೇಳೆ ಡಿಸ್​ಪ್ಲೇ ಒಡೆದರೆ ಅಥವಾ ಬಿರುಕು ಬಿಟ್ಟರೆ ಅದರ ಮೇಲಿನ ಪ್ರೀತಿ ಕಡಿಮೆಯಾಗುತ್ತದೆ. ಇಲ್ಲವಾದರೆ ಹೊಸ ಡಿಸ್​ಪ್ಲೇ ಹಾಕಿಕೊಳ್ಳಬೇಕಾಗುತ್ತದೆ. ಆದರೆ ಇನ್ಮುಂದೆ ಸ್ಮಾರ್ಟ್​ಫೋನ್​ ಡಿಸ್​ಪ್ಲೇ ಒಡೆದರೆ ಚಿಂತಿಸಬೇಕಾಗಿಲ್ಲ.

ಹೌದು, ಕೊಲ್ಕತ್ತಾದ ಇಂಡಿಯನ್​ ಇನ್ಸ್ಟಿಟ್ಯೂಟ್​​ ಆಫ್​​ ಸೈನ್ಸ್​ ಎಜುಕೇಶನ್​ ಅಂಡ್ ರಿಸರ್ಚ್​​ ಸ್ಮಾರ್ಟ್​​ಫೋನ್​ ಡಿಸ್​ಪ್ಲೇ ತಯಾರಿಸುತ್ತಿದೆ. ಈ ಡಿಸ್​ಪ್ಲೇ ಬಿರುಕು ಬಿಟ್ಟರೆ ಸ್ವಯಂ ಜೋಡಿಸುತ್ತದೆ.

ಹಲವು ವರ್ಷಗಳಿಂದ ಈ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಸದ್ಯ ವಿಜ್ಞಾನಿಗಳು ಯಶಸ್ಸು ಕಂಡಿದ್ದಾರೆ. ಆದರೆ ಇಂಡಿಯನ್​ ಇನ್ಸ್ಟಿಟ್ಯೂಟ್​​ ಆಫ್​​ ಸೈನ್ಸ್​ ಎಜುಕೇಶನ್​ ಅಂಡ್ ರಿಸರ್ಚ್​​ ತಯಾರಿಸುವ ಡಿಸ್​ಪ್ಲೇ ಮೃದು ಮತ್ತು ಅಪಾರದರ್ಶಕತೆಗೆ ಹೆಚ್ಚು ಸೂಕ್ತವಲ್ಲ ಎಂದು ಅರಿತು ಕೊನೆಗೆ ಸ್ವಯಂ ಜೋಡಣೆ ಮಾಡುವ ಡಿಸ್​ಪ್ಲೇಯತ್ತ ಹೆಚ್ಚು ಗಮನ ಹರಿಸಲು ನಿರ್ಧರಿಸಿದೆಯಂತೆ.

ಸಂಶೋಧಕರು ಇದಕ್ಕಾಗಿ ಪೈಜೋಎಲೆಕ್ಟ್ರಿಕ್​ ಸಾವಯವ ವಸ್ತುಗಳನ್ನು ಬಳಸಿದ್ದು, ಇದು ಯಾಂತ್ರಿಕ ಶಕ್ತಿಯನ್ನು ವಿದ್ಯುತ್​ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಹಾಗೆಯೇ 2mm ಗಿಂತ ಹೆಚ್ಚು ಅಥವಾ 0.2 ಮೀ ಅಗಲವಿಲ್ಲದ ಸೂಜಿ ಆಕಾರದ ಹರುಳುಗಳನ್ನು ತಯಾರಿಸುತ್ತದೆ ಎಂದು ಪ್ರಾಯೋಗಿಕ ಫಲಿತಾಂಶದಲ್ಲಿ ತಿಳಿಸಿದೆ.

ವಿಶೇಷವಾಗಿ ತಯಾರಿಸಲಾದ ಹರಳುಗಳಲ್ಲಿನ ಅಣ್ವಿಕ ಜೋಡಣೆಯಿಂದಾಗಿ, ಬಲವಾದ ಆಕರ್ಷಕ ಶಕ್ತಿ ಉತ್ಪತ್ತಿಯಾಗಿದೆ. ಇದರಿಂದಾಗಿ ಡಿಸ್​ಪ್ಲೇ ಒಡೆದರೆ ಆಕರ್ಷಕ ಶಕ್ತಿಗಳು ಸ್ವಯಂ ಜೋಡಿಸುಲು ಪ್ರಯತ್ನಿಸುತ್ತದೆ.

ಇಂಡಿಯನ್​ ಇನ್ಸ್ಟಿಟ್ಯೂಟ್​​ ಆಫ್​​ ಸೈನ್ಸ್​ ಎಜುಕೇಶನ್​ ಅಂಡ್ ರಿಸರ್ಚ್​ನ ಪ್ರಮುಖ ಸಂಶೋಧಕರಾದ ಪ್ರೊಫೆಸರ್​ ಚಿಲ್ಲಾ ಮಲ್ಲಾ ರೆಡ್ಡಿ, ನಮ್ಮ ಸ್ವಯಂ ಜೋಡಿಸುವ ಈ ವಸ್ತುಗಳು 10 ಪಟ್ಟು ಕಠಿಣವಾಗಿದೆ. ಆಂತರಿಕ ಸ್ಫಟಿಕದ ರಚನೆಯನ್ನು ಹೊಂದಿದೆ. ಜೊತೆಗೆ ಎಲೆಕ್ಟ್ರಾನಿಕ್ಸ್​ ಮತ್ತು ಆಪ್ಟಿಕಲ್​ ಬಲವು ಹೊಂದಿದೆ ಎಂದಿದ್ದಾರೆ.

You may also like

Leave a Comment