ನೀವೇನಾದರೂ ಹೊಸ ಟಿವಿ ಖರೀದಿ ಮಾಡುವ ಯೋಜನೆ ಹಾಕಿದ್ದರೆ ಈ ಮಾಹಿತಿ ತಿಳಿದು ಕೊಳ್ಳುವುದು ಒಳ್ಳೆಯದು. ದೈನಂದಿನ ಪ್ರತಿ ವಸ್ತುಗಳ ಬೆಲೆ ಏರಿಕೆ ಕಂಡು ನಿಮ್ಮ ನೆಚ್ಚಿನ ಸ್ಮಾರ್ಟ್ ಟಿವಿ ಖರೀದಿ ಮಾಡುವ ಯೋಜನೆ ಜಾರಿಗೆ ತರಲು ಹಣಕಾಸಿನ ಸಮಸ್ಯೆ ಉಂಟಾಗಿ ಕನಸಾಗಿ ಉಳಿದಿದ್ದರೆ, ಕೈಗೆ ಎಟಕುವ ದರದಲ್ಲಿ ಅತ್ಯುತ್ತಮ ಸ್ಮಾರ್ಟ್ ಟಿವಿ ಆಫರ್ ಮೂಲಕ ನಿಮ್ಮದಾಗಿಸಿಕೊಳ್ಳಬಹುದು.
ಭರ್ಜರಿ ಆಫರ್ಸ್ನೊಂದಿಗೆ ಸ್ಮಾರ್ಟ್ಟಿವಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ನಿಮಗಾಗಿ ಒಂದು ಸೂಪರ್ ಡೀಲ್ ಲಭ್ಯವಿದೆ.ಪ್ರಮುಖ ಇ-ಕಾಮರ್ಸ್ ಕಂಪನಿಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್, ಸ್ಮಾರ್ಟ್ ಟಿವಿಯ ಮೇಲೆ ಬಂಪರ್ ಆಫರ್ ನೀಡಿದ್ದು, ಶೇಕಡಾ 63 ರಷ್ಟು ರಿಯಾಯಿತಿಯಲ್ಲಿ ಸ್ಮಾರ್ಟ್ಟಿವಿಯನ್ನು ಪಡೆಯಬಹುದು. ನೀವು ಕಡಿಮೆ ಇಎಮ್ಐ ವೆಚ್ಚದ ಮೂಲಕವೂ ಈ ಸ್ಮಾರ್ಟ್ಟಿವಿಯನ್ನು ಖರೀದಿ ಮಾಡಬಹುದು.
ಈಗಿನ ಸ್ಮಾರ್ಟ್ಟಿವಿಗಳು ಹೆಚ್ಚಾಗಿ ಸ್ಮಾರ್ಟ್ಫೋನ್ನಂತೆಯೇ ಫೀಚರ್ಸ್ ಅನ್ನು ಹೊಂದಿದ್ದು, ಸ್ಮಾರ್ಟ್ ಟಿವಿ ಬೆಲೆಗಳು ಕೂಡ ಗುಣಮಟ್ಟವನ್ನು ಅವಲಂಬಿತ ವಾಗಿರುತ್ತದೆ. ಇದೀಗ ಫ್ಲಿಪ್‌ಕಾರ್ಟ್ ಎರಡು ಸ್ಮಾರ್ಟ್ಟಿವಿಗಳ ಮೇಲೆ ಬಂಪರ್ ರಿಯಾಯಿತಿಯನ್ನು ಘೋಷಿಸಿದ್ದು, ನೀವೇನಾದರೂ ಸ್ಮಾರ್ಟ್ ಟಿವಿ ಕೊಳ್ಳುವ ಪ್ಲಾನ್ ಹಾಕಿದ್ದರೆ ಈ ಆಫರ್ ಮೂಲಕ ಉತ್ತಮ ಟಿವಿ ನಿಮ್ಮ ದಾಗಿಸಿಕೊಳ್ಳಬಹುದು. ಬ್ಯಾಂಕ್ ಆಫರ್ಸ್ಗಳು ಕೂಡ ನಿಮಗಾಗಿ ಲಭ್ಯವಿದ್ದು ಕೈಗೆ ಎಟಕುವ ದರದಲ್ಲಿ ಸ್ಮಾರ್ಟ್ ಟಿವಿ ಕೊಂಡುಕೊಳ್ಳಬಹುದು.
ಫ್ಲಿಪ್ಕಾರ್ಟ್ನಲ್ಲಿ ಸ್ಮಾರ್ಟ್ ಟಿವಿಯಲ್ಲಿ ಆಫರ್ ನಲ್ಲಿ ಲಭ್ಯವಿದ್ದು, ಥಾಮ್ಸನ್ ಆಲ್ಫಾ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಸಹ ಭಾರೀ ರಿಯಾಯಿತಿಯಲ್ಲಿ ಖರೀದಿ ಮಾಡಬಹುದು. ಈ ಸ್ಮಾರ್ಟ್ಟಿವಿಯ ಎಮ್ಆರ್ಪಿ ಬೆಲೆ 14,999 ರೂಪಾಯಿ ಆಗಿದ್ದು ಆದರೆ ಆಫರ್ನಲ್ಲಿ ಕೇವಲ 7,999 ರೂಪಾಯಿಗೆ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಬ್ಯಾಂಕ್ ಆಫರ್ ಮೂಲಕ ಈ ಸ್ಮಾರ್ಟ್ಟಿವಿಯನ್ನು ಕೇವಲ 7199 ರೂಪಾಯಿಗೆ ಖರೀದಿ ಮಾಡಬಹುದು. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಶೆಕಡಾ 10 ಪ್ರತಿಶತ ತ್ವರಿತ ರಿಯಾಯಿತಿ ಲಭ್ಯವಿದ್ದು ಬ್ಯಾಂಕ್ ಕಾರ್ಡ್ ಮೂಲಕ 800 ರೂಪಾಯಿವರೆಗೆ ರಿಯಾಯಿತಿಯನ್ನು ಪಡೆಯಬಹುದಾಗಿದೆ.
ಆಡ್ಸನ್ ಕಂಪನಿಯ 32 ಇಂಚಿನ ಸ್ಮಾರ್ಟ್ ಟಿವಿ ಭಾರೀ ರಿಯಾಯಿತಿಯನ್ನು ಹೊಂದಿದ್ದು, ಈ ಎಲ್ಇಡಿ ಹೆಚ್ಡಿ ರೆಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ ಮೂಲ ಬೆಲೆ. 21,999 ಆಗಿದ್ದು, ಆದರೆ ನೀವು ಈಗ ಈ ಸ್ಮಾರ್ಟ್ಟಿವಿಯನ್ನು ರಿಯಾಯಿತಿ ಮೂಲಕ ಕೇವಲ ರೂ. 8099 ಖರೀದಿ ಮಾಡಬಹುದಾಗಿದ್ದು, ಸ್ಮಾರ್ಟ್ ಟಿವಿಯ ಮೇಲೆ ಶೇಕಡಾ 63 ರಷ್ಟು ರಿಯಾಯಿತಿ ದರದಲ್ಲಿ ನಿಮಗೆ ದೊರೆಯಲಿದೆ. ಇದಲ್ಲದೆ, ಈ ಟಿವಿಯಲ್ಲಿ ಇತರ ಕೊಡುಗೆಗಳು ಕೂಡ ದೊರೆಯಲಿದ್ದು, ಬ್ಯಾಂಕ್ ಕೊಡುಗೆ ಮೂಲಕವೂ ಈ ಸ್ಮಾರ್ಟ್ಟಿವಿಯನ್ನು ಖರೀದಿ ಮಾಡಬಹುದು.
ಬ್ಯಾಂಕ್ ಮೂಲಕ ಖರೀದಿ ಮಾಡುವುದಾದರೆ, 404 ರೂಪಾಯಿಯಷ್ಟು ರಿಯಾಯಿತಿ ಲಭ್ಯವಿದ್ದು ಈ ಆಫರ್ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಮಾತ್ರ ನಿಮಗೆ ದೊರೆಯಲಿದೆ ಎಂಬುದನ್ನು ಗಮನಿಸಬೇಕು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಈ ಟಿವಿಯಲ್ಲಿ ನೀವು ಕಡಿಮೆ ಇಎಮ್ಐ ಅನ್ನು ಪಾವತಿ ಮಾಡುವ ಮುಖಾಂತರ ಕೂಡ ಖರೀದಿ ಮಾಡಬಹುದಾಗಿದೆ.
ಆದರೆ ಆರಂಭಿಕ ಇಎಮ್ಐ ರೂ. 281 ಆಗಿದ್ದು, ಇದು 36 ತಿಂಗಳ ಅವಧಿಗೆ ಅನ್ವಯವಾಗಲಿದೆ.ಇದರ ಜೊತೆಗೆ 24 ತಿಂಗಳಿಗೆ ಆದರೆ ತಿಂಗಳಿಗೆ ರೂ. 397 ಕಟ್ಟಬೇಕಾಗುತ್ತದೆ. ಇದರ ಜೊತೆಗೆ 18 ತಿಂಗಳ ವ್ಯಾಲಿಡಿಟಿಯ ಮೂಲಕ ತಿಂಗಳಿಗೆ ರೂ. 510 ಪಾವತಿ ಮಾಡಿ ಒಂದು ವರ್ಷದ ಅವಧಿಯ ಮೂಲಕ ನೀವು 732 ರೂಪಾಯಿ ಕಟ್ಟಬೇಕಾಗುತ್ತದೆ. ಅದೇ ರೀತಿ,9 ತಿಂಗಳ ಇಎಮ್ಐ ಮೂಲಕ ನೀವು ತಿಂಗಳಿಗೆ ರೂ. 958 ಪಾವತಿ ಮಾಡಬೇಕಾಗುತ್ತದೆ.
